ನೂಜಿಬಾಳ್ತಿಲ: ಟ್ರಾನ್ಸ್‌ಫಾರ್ಮರ್ ನಿಂದ ಹಾರಿದ ಬೆಂಕಿ ಕಿಡಿಯಿಂದಾಗಿ ರಬ್ಬರ್ ತೋಟ ಬೆಂಕಿಗಾಹುತಿ ► ಬೆಂಕಿ ನಂದಿಸಲು ಯಶಸ್ವಿಯಾದ ಬೆಥನಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರವರು

(ನ್ಯೂಸ್ ಕಡಬ) newskadaba.com ಕಡಬ, ಮಾ.02. ವಿದ್ಯುತ್ ಪರಿವರ್ತಕದಿಂದ ಎಸೆಯಲ್ಪಟ್ಟ ಬೆಂಕಿ ಕಿಡಿಯಿಂದಾಗಿ ಸುಮಾರು ಒಂದು ಎಕರೆ ಗುಡ್ಡ ಬೆಂಕಿಗಾಹುತಿಯಾದ ಘಟನೆ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೂಜಿಬಾಳ್ತಿಲ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ.

ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಂತೆ ಇರುವ ಸ್ಥಳೀಯರೊಬ್ಬರ ಸುಮಾರು ಒಂದು ಎಕರೆ ರಬ್ಬರ್ ತೋಟವು ಬೆಂಕಿಗಾಹುತಿಯಾಗಿದ್ದು, ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ಹಾಗೂ ಊರವರು ಸೇರಿಕೊಂಡು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

Also Read  ಗಡಿಯಾರ: ಲಾರಿ - ದ್ವಿಚಕ್ರ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು

error: Content is protected !!