(ನ್ಯೂಸ್ ಕಡಬ) newskadaba.com ಢಾಕಾ, ಸೆ. 12. ಅಜಾನ್ ಮತ್ತು ನಮಾಜ್ ವೇಳೆ ಎಲ್ಲಾ ಮಂದಿರ ಹಾಗೂ ಪ್ರಾರ್ಥನಾ ಕೇಂದ್ರಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾದೇಶದ ಸರ್ಕಾರ ಸೂಚಿಸಿದೆ. ನಮಾಜ್ ಹಾಗೂ ಆಜಾನ್‍ಗೂ 5 ನಿಮಿಷ ಮೊದಲೇ ಮಂದಿರಗಳ ಮೈಕ್ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಮಧ್ಯಂತರ ಸರ್ಕಾರ ಹಿಂದೂ ಸಮುದಾಯಕ್ಕೆತಾತ್ಕಾಲಿಕವಾಗಿ ದುರ್ಗಾ ಪೂಜೆ ಸಂಬಂಧಿತ ಚಟುವಟಿಕೆಗಳು, ವಿಶೇಷ ಸಂಗೀತ ಕಾರ್ಯಕ್ರಮವನ್ನು ನಮಾಜ್ ಹಾಗೂ ಆಜಾನ್ ವೇಳೆ ನಿಲ್ಲಿಸುವಂತೆ ಸೂಚಿಸಿದೆ. ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನೀಡಲಾಗಿದೆ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.