ಮಂಗಳೂರು: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಹಿಳಾ ವಿಭಾಗದ ವತಿಯಿಂದ ಟೈಲರಿಂಗ್ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಮಂಗಳೂರಿನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಹಿಳಾ ವಿಭಾಗದ ವತಿಯಿಂದ ಮಹಿಳೆಯರಿಗೆ ಸೆಪ್ಟೆಂಬರ್ 17 ರಿಂದ 3 ತಿಂಗಳ ಟೈಲರಿಂಗ್ ತರಬೇತಿಯನ್ನು ಆಯೋಜಿಸಲಾಗಿದೆ.

ತರಬೇತಿಯು ಮಂಗಳೂರಿನ ಯೆಯ್ಯಾಡಿಯಲ್ಲಿರುವ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಸಾರ್ವಜನಿಕ ರಜೆಗಳ ಹೊರತಾಗಿ ಪ್ರತಿದಿನ ತರಬೇತಿ ನಡೆಯಲಿದೆ. ತರಬೇತಿಗೆ ಬೇಕಾದ ಸಾಮಗ್ರಿಗಳನ್ನು ಅಭ್ಯರ್ಥಿಗಳೇ ತರಬೇಕು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಪಾಲ್ಗೊಂಡವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಕಚೇರಿ, ದೂರವಾಣಿ ಸಂಖ್ಯೆ 9483791031 ಸಂಪರ್ಕಿಸುವಂತೆ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಕಾರ್ಯದರ್ಶಿ ಪ್ರಕಟಣೆ ತಿಳಿಸಿದ್ದಾರೆ.

Also Read  ವಾಹನಗಳ ಬಹಿರಂಗ ಹರಾಜು

error: Content is protected !!
Scroll to Top