ಶಾಲಾ ವಾಹನ ಹರಿದು 4 ವರ್ಷದ ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ. 12.  ಶಾಲಾ ವಾಹನ ಹರಿದು ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೃತ ಮಗು ಶಿವಪುರ ಗ್ರಾಮದ ರಾಜಶೇಖರ್ ಎಂಬವರ ಪುತ್ರಿ ಖುಷಿ ಬನ್ನಟ್ಟಿ (4) ಎಂದು ಗುರುತಿಸಲಾಗಿದೆ. ಶಾಲಾ ವಾಹನ ಚಾಲಕ ಶ್ರೀಶೈಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಾಲಾ ವಾಹನದಲ್ಲಿ ಬಂದಿಳಿದ ಮಗು ತನ್ನ ತಂದೆಯನ್ನು ಕಂಡು ವಾಹನದ ಹಿಂಬದಿಯಾಗಿ ಓಡಿತ್ತು. ಇದನ್ನು ಗಮನಿಸದ ಚಾಲಕ ಅಷ್ಟರಲ್ಲೇ ವಾಹನವನ್ನು ಹಿಂದಕ್ಕೆ ತಿರುಗಿಸಿಕೊಳ್ಳುವಾಗ ಹಿಂಬದಿ ಚಕ್ರದಡಿಗೆ ಬಾಲಕಿ ಸಿಲುಕಿ ಪ್ರಾಣಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಚಾಲಕನ ನಿರ್ಲಕ್ಷ್ಯ ಮಗುವಿನ ಸಾವಿನ ಕಾರಣ ಎಂದು ಮೃತ ಬಾಲಕಿ ಪೋಷಕರು ಆರೋಪಿಸಿದ್ದು, ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಘೀರ ಚಿತ್ರದ ಶೂಟಿಂಗ್ ವೇಳೆ ಅವಘಡ     ➤ ನಟ ಶ್ರೀಮುರಳಿ ಕಾಲಿಗೆ ಗಾಯ, ಶೀರ್ಘದಲ್ಲೇ ಸರ್ಜರಿ

 

error: Content is protected !!
Scroll to Top