(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 12. ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಮಾರುತಿ ನಗರದ ನಿವಾಸಿ ಕಲ್ಲೇಶ ಸುಲೇಕಿ (25) ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.
ಪಟಾಕಿ ಸಿಡಿದಿದ್ದರಿಂದ ಯುವಕನ ಒಂದು ಕಣ್ಣುಗೆ ತೀವ್ರ ಗಾಯವಾಗಿದ್ದು, ತಲೆಗೆ ಗಾಯವಾಗಿ ರಕ್ತಸ್ರಾವವಾಗಿದೆ. ತಕ್ಷಣ ಯುವಕನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದರಿಂದ ತುರ್ತು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ. ಗಣಪತಿ ವಿಸರ್ಜನೆ ವೇಳೆ ಮಾರುತಿ ವೃತ್ತದಲ್ಲಿ ಎರಡು ಮೆರವಣಿಗೆಗಳು ಸೇರಿವೆ. ಭಾರಿ ಪ್ರಮಾಣದ ಡಿಜೆ ಸದ್ದಿಗೆ ಯುವಕರು ಕುಣಿಯುತ್ತಿದ್ದಾಗ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತಿತ್ತು. ಗೊಂದಲದಲ್ಲಿ ಪಟಾಕಿ ಯುವಕನ ತಲೆಗೆ ಪಟಾಕಿ ತಾಕಿದೆ ಎನ್ನಲಾಗಿದೆ. ಘಟನೆ ನಂತರ ಡಿಜೆ ಬಂದ್ ಮಾಡಿಸಿ ಮೆರವಣಿಗೆ ಕಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.