ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಮಿತ್ತೂರು ನೌರತುಲ್ ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ‘ಸಮಗ್ರ ಪ್ರಶಸ್ತಿ’

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 12.  ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ‘ಪ್ರತಿಭಾ ಕಾರಂಜಿ’ ಯಲ್ಲಿ ಮಿತ್ತೂರು ನೌರತುಲ್ ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.


ಅರಬಿಕ್ ಧಾರ್ಮಿಕ ಪಠಣದಲ್ಲಿ 6ನೆ ತರಗತಿಯ ಮುಹಮ್ಮದ್ ಹಸನ್ ಖಿದಾಷ್ ಮಿತ್ತೂರು, ಚಿತ್ರಕಲೆಯಲ್ಲಿ 7ನೇ ತರಗತಿಯ ಹಾಜರ ಮುಫೀದಾ ಕೊಡಾಜೆ, ಹಿಂದಿ ಕಂಠಪಾಠದಲ್ಲಿ 7ನೆ ತರಗತಿಯ ಆಯಿಷತುಲ್ ಹೈಫಾ ಪೆರುಮೊಗೇರು,  ಕವನ ವಾಚನದಲ್ಲಿ 6ನೆ ತರಗತಿಯ ಮುಹಮ್ಮದ್ ಹಸನ ಖಿದಾಷ್ ಮಿತ್ತೂರು ಪ್ರಥಮ ಸ್ಥಾನಿಗಳಾಗಿದ್ದಾರೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಚಿತ್ರಕಲೆಯಲ್ಲಿ 4ನೆ ತರಗತಿಯ ಫಾತಿಮಾ ಸಫಾ ಕೊಡಾಜೆ ಪ್ರಥಮ ಹಾಗೂ ದೇಶಭಕ್ತಿ ಗೀತೆಯಲ್ಲಿ 3ನೆ ತರಗತಿಯ ಮುಹಮ್ಮದ್ ಇಬ್ರಾಹಿಂ ಫಿರಾಶ್ ತೃತೀಯ ಸ್ಥಾನಗಳಿಸಿದ್ದಾರೆ. ಕಂಬಳಬಿಟ್ಟು ಕ್ಲಸ್ಟರ್ ವ್ಯಾಪ್ತಿಯ ಹತ್ತು ಶಾಲೆಗಳ ವಿದ್ಯಾರ್ಥಿಗಳು ಸುಮಾರು ಹದಿನೈದು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Also Read  72 ವರ್ಷಗಳ ಹಳೆಯ ಪ್ರಕರಣ ಕೊನೆಗೂ ಇತ್ಯರ್ಥ !

 

error: Content is protected !!
Scroll to Top