ವಯನಾಡು- ಭೂಕುಸಿತದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಯುವತಿಗೆ ಬಿಗ್ ಶಾಕ್ – ಮದುವೆಯಾಗಲಿರುವ ಯುವಕ ಅಪಘಾತದಲ್ಲಿ ಮೃತ್ಯು…!

(ನ್ಯೂಸ್ ಕಡಬ) newskadaba.com ಕೇರಳ, ಸೆ. 12. ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡು ನೊಂದಿದ್ದ ಯುವತಿಯು ಇದೀಗ ಮದುವೆಯಾಗಬೇಕಿದ್ದ ವರನನ್ನೂ ಕಳೆದುಕೊಂಡು ಬರಸಿಡಿಲು ಬಡಿದಂತಾಗಿದೆ.

ಕಳೆದ ಜುಲೈ ತಿಂಗಳಲ್ಲಿ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದ ಯುವತಿ ಇದೀಗ ಆಕೆ ಮದುವೆಯಾಗಬೇಕಿದ್ದ ವರ ಜೆನ್ಸನ್ ಕೂಡಾ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ಜೆನ್ಸನ್​ ಪ್ರಯಾಣಿಸುತ್ತಿದ್ದ ಕಾರು ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶೃತಿ, ಜೆನ್ಸನ್​ ಸೇರಿದಂತೆ ಕುಟುಂಬ ಸದಸ್ಯರು ಗಾಯಗೊಂಡಿದ್ದರು. ಆದರೆ ಉಳಿದವರು ಬದುಕುಳಿದಿದ್ದಾರೆ, ಜೆನ್ಸನ್​ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಜುಲೈ 30 ರಂದು ಸಂಭವಿಸಿದ ಭೂಕುಸಿತದಲ್ಲಿ ಮೆಪ್ಪಾಡಿ ಪಂಚಾಯತ್‌ನ ಚೂರಲ್‌ಮಲಾ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಶ್ರುತಿ ಅವರ ಒಂಬತ್ತು ಕುಟುಂಬ ಸದಸ್ಯರು ಪ್ರಾಣ ಕಳೆದುಕೊಂಡಿದ್ದರು. ಆಕೆ ಜೆನ್ಸನ್​ ಅನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದು, ಜೂನ್ 2 ರಂದು ನಿಶ್ಚಿತಾರ್ಥವೂ ನಡೆದಿತ್ತು. ಡಿಸೆಂಬರ್​ನಲ್ಲಿ ಮದುವೆಯಾಗುವವರಿದ್ದರು.

Also Read  ಕಡಬ: ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ

error: Content is protected !!
Scroll to Top