ಅರಂತೋಡು: ನೆಹರು ಸ್ಮಾರಕ ಪ.ಪೂ ಕಾಲೇಜು ಅರಂತೋಡು ಮತ್ತು ಕೆ ಎಸ್ ಗೌಡ ಪ.ಪೂ ಕಾಲೇಜು ನಿಂತಿಕಲ್ಲು ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 11.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ವಿಭಾಗ) ಮಂಗಳೂರು ಮತ್ತು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ತ್ರೋಬಾಲ್ ಪಂದ್ಯಾಟ ನಡೆಯಿತು. ತಾಲೂಕಿನ 14 ತಂಡಗಳು ಭಾಗವಹಿಸಿದ್ದವು.

ಬಾಲಕಿಯರ ವಿಭಾಗದಲ್ಲಿ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ಬಾಲಕರ ವಿಭಾಗದಲ್ಲಿ ಕೆ ಎಸ್ ಗೌಡ ಪದವಿಪೂರ್ವ ಕಾಲೇಜು ನಿಂತಿಕಲ್ಲು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕಿಯರ ವಿಭಾಗದಲ್ಲಿ ರೋಟರಿ ಪದವಿಪೂರ್ವ ಕಾಲೇಜು ಸುಳ್ಯ ಮತ್ತು ಬಾಲಕರ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ  ಪಡೆದುಕೊಂಡಿದೆ. ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ವೇದಿಕೆಯಲ್ಲಿ ಹಿರಿಯ ಉಪನ್ಯಾಸಕ ಲಿಂಗಪ್ಪ ಪೂಜಾರಿ, ಪದ್ಮ ಕುಮಾರ್ , ದೈಹಿಕ ಶಿಕ್ಷಣ ಉಪನ್ಯಾಸಕಿ ಶಾಂತಿ ಎ.ಕೆ.ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ್ ಉಪಸ್ಥಿತರಿದ್ದರು.ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪಂದ್ಯಾಟದ ನಿರ್ಣಾಯಕರಾಗಿ ಹರೀಶ್ ಪ್ರಸಾದ್ ಬಾಳಿಲ ಮತ್ತು ರಮೇಶ್ ಎಲಿಮಲೆ ಸಹಕರಿಸಿದರು.                               

Also Read  ಕನ್ಯಾ ರಾಶಿಯವರಿಗೆ ಹಣ ಹೂಡಿಕೆಗೆ ಇಂದು ಉತ್ತಮ ದಿನ - ಉಳಿದ ರಾಶಿಯ ಬಗ್ಗೆ ತಿಳಿಯಿರಿ

 

error: Content is protected !!
Scroll to Top