ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪನ: ದೆಹಲಿಯಲ್ಲೂ ಕಂಪನದ ಅನುಭವ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 11.  ಪಾಕಿಸ್ತಾನದಲ್ಲಿ ಇಂದು 5.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಲಘು ಕಂಪನದ ಅನುಭವ ಆಗಿದೆ ಎಂದು ವರದಿಯಾಗಿದೆ.

ಮಧ್ಯಾಹ್ನ 12:58ರ ವೇಳೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಡಿಜಿ ಖಾನ್‌(ಶಾದಿ ವಾಲಾ) 33 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ. ಪಾಕಿಸ್ತಾನದ ಪೇಶಾವರ, ಇಸ್ಲಾಮಾಬಾದ್ ಮತ್ತು ಲಾಹೋರ್‌ನಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ದೆಹಲಿ, ನೋಯ್ಡಾ ಮತ್ತು ಪಂಜಾಬ್‌ನ ಕೆಲವು ಭಾಗಗಳಲ್ಲಿ ಲಘು ಕಂಪನದ ಅನುಭವವಾಗಿದೆ. ಇನ್ನು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಮಿ ಕಂಪಿಸಿದೆ. ಆದರೆ ಸದ್ಯ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ವರದಿ ತಿಳಿಸಿದೆ.

Also Read  ಮಳೆಗಾಗಿ ದೇಗುಲದಲ್ಲಿ ಸರ್ಕಾರದ ವಿಶೇಷ ಪೂಜೆ

 

error: Content is protected !!
Scroll to Top