ಕಾಡಾನೆ ದಾಳಿ- ಅಪಾರ ಪ್ರಮಾಣದ ಭತ್ತದ ಪೈರು, ತೆಂಗು, ಅಡಿಕೆ, ಬಾಳೆಗಿಡ ನಾಶ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 11. ಗದ್ದೆ, ತೊಟಗಳಿಗೆ ನುಗ್ಗಿರುವ ಎರಡು ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿಯುಂಟು ಮಾಡಿರುವ ಘಟನೆ ತಾಲೂಕಿನ ಪುದುವೆಟ್ಟು ಗ್ರಾಮದ ನಡ್ವೈಲ್ ಬೈಲಿನಲ್ಲಿ ನಡೆದಿದೆ.

ಸ್ಥಳೀಯರಾದ ಭಿರ್ನಾಲಿ ಚಂದಪ್ಪ ಗೌಡ, ಲಿಂಗಪ್ಪ ಸಾಲಿಯಾನ್ ಕೂಡೈ, ಆನಂದ ಗೌಡ ಹೊಸಮನೆ, ನಾರಾಯಣ ಗೌಡ ಗುತ್ತು, ಪಟ್ಲ ದೇಜಪ್ಪ ಗೌಡ ಮೊದಲಾದವರ ತೋಟ ಹಾಗೂ ಗದ್ದೆಗಳಿಗೆ ನುಗ್ಗಿರುವ ಆನೆಗಳು 8 ತೆಂಗಿನ ಮರಗಳು, 10 ಅಡಿಕೆ ಮರ ಹಾಗೂ 10 ಕ್ಕೂಅಧಿಕ ಬಾಳೆಗಿಡಗಳನ್ನು ನಾಶ ಮಾಡಿರುವುದಾಗಿ ತಿಳಿದುಬಂದಿದೆ.   ಹಲವು ಕಡೆ ಭತ್ತದ ಗದ್ದೆಗಳಲ್ಲಿ ಓಡಾಡಿರುವ ಆನೆಗಳು ಪೈರನ್ನು ನಾಶಗೊಳಿಸಿದೆ. ಉಪವಲಯಾರಣ್ಯ ಅಧಿಕಾರಿ ರವಿಚಂದ್ರ ನೇತೃತ್ವದಲ್ಲಿ ಇಲಾಖೆಯಅಧಿಕಾರಿಗಳು ರಾತ್ರಿ 9:30ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಸ್ಥಳದಲ್ಲೇ ಇದ್ದು, ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಕಾಡಿನತ್ತ ತೆರಳಲಿಲ್ಲ. ಮುಂಜಾನೆ 5 ಗಂಟೆಯವರೆಗೂ ತೋಟದಲ್ಲೇ ಸುತ್ತಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

error: Content is protected !!
Scroll to Top