‘ಏಸ್’ ಐ.ಎ.ಎಸ್ ಅಕಾಡೆಮಿಯ 2024-25ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11.  ನಗರದ ಕಂಕನಾಡಿಯಲ್ಲಿರುವ ‘ಏಸ್’ ಐ.ಎ.ಎಸ್ ಅಕಾಡಮಿಯ 2024-25ನೇ ಸಾಲಿನ ಐಎಎಸ್/ಕೆಎಎಸ್ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ ಮತ್ತು ‘ಪರಿಣಾಮಕಾರಿ ಸಂವಹನʼ ಕಾರ್ಯಾಗಾರ ನಡೆಯಿತು.

ನೂತನ ಬ್ಯಾಚ್ ಉದ್ಘಾಟಿಸಿದ ಸಂಸ್ಥೆಯ ಹಳೇ ವಿದ್ಯಾರ್ಥಿ, ಪೊಲೀಸ್ ಸಬ್-ಇನ್ ಸ್ಪೆಕ್ಟರ್ ಮುಶಾಹಿದ್ ಅಹ್ಮದ್ ಮಾತನಾಡಿ, ಏಸ್ ಸಂಸ್ಥೆಯು ಕರಾವಳಿ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ಪಡೆಯಲು ಒದಗಿಸುತ್ತಿರುವ ತರಬೇತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾಪಕಾದ್ಯಕ್ಷ ನ್ಯಾಯವಾದಿ ಸಾದುದ್ದೀನ್ ಸಾಲಿಹಿ, ನವೀಕೃತ ವೆಬ್ ಸೈಟನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಐಒಸಿಎಲ್ ಸಂಸ್ಥೆಯ ಮಾಜಿ ಜನರಲ್ ಮ್ಯಾನೇಜರ್ ಅಬ್ದುಲ್ ಸಲಾಮ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Also Read  ಸ್ವಾತಂತ್ರ್ಯ ನಂತರ ದೇಶದಲ್ಲಿ ನಡೆದ ಎಲ್ಲಾ ದೌರ್ಜನ್ಯಗಳ ಹಿಂದೆ ಆರೆಸ್ಸೆಸ್ ಪಾತ್ರವಿದೆ ➤ ಮುಹಮ್ಮದ್ ಶಾಕಿಫ್

 

error: Content is protected !!
Scroll to Top