(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ಕರಾವಳಿಯ ಪ್ರಮುಖ ತೀರಗಳಾದ ಮಲ್ಪೆ ಹಾಗೂ ಮೂಲ್ಕಿ ಎಂಬ ಹೆಸರಿರುವಂತಹ ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಹಡಗುಗಳನ್ನು ಭಾರತೀಯ ನೌಕಾಪಡೆ ತಯಾರಿಸಿದೆ. ಈ ಹಡಗುಗಳಲ್ಲಿ ನೀರಿನಾಳದಲ್ಲಿರುವ ವಸ್ತುಗಳನ್ನು ಗುರುತಿಸಬಲ್ಲ ಸೆನ್ಸರ್ ಗಳನ್ನು ಅಳವಡಿಸಲಾಗಿದೆ. ತೀರ ಪ್ರದೇಶದಲ್ಲಿನ ನೆಲಬಾಂಬ್ ಗಳನ್ನು ಪತ್ತೆಹಚ್ಚಲು, ಜಲಾಂತರ್ಗಾಮಿಗಳ ಸಂಚಾರದ ಮೇಲೆ ಕಣ್ಣಿಡಲು ಇವು ಸಹಾಯ ಮಾಡುತ್ತವೆ. ಒಟ್ಟು 16 ಜಲಾಂತರ್ಗಾಮಿ ನಿಗ್ರಹ ಹಡಗುಗಳನ್ನು ತಯಾರು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೊಚ್ಚಿ ಹಾಗೂ ಕೋಲ್ಕತ್ತಾದಲ್ಲಿರುವ ಸಂಸ್ಥೆಗಳು ತಲಾ 8 ಹಡಗುಗಳನ್ನು ತಯಾರು ಮಾಡಲಿವೆ. ಇದಕ್ಕಾಗಿ ಕೇಂದ್ರ ಸರಕಾರದ ಜೊತೆಗೆ 2019ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.