ಖ್ಯಾತ ಕಲಾವಿದ ಸೈಯದ್ ಹೈದರ್ ರಾಝಾ ಅವರ ಚಿತ್ರಕಲೆ ಕಳವು

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 11.  ಖ್ಯಾತ ಕಲಾವಿದ ಸೈಯದ್ ಹೈದರ್ ರಾಝಾ ಅವರ ₹ 2.5 ಕೋಟಿಗೂ ಹೆಚ್ಚು ಮೌಲ್ಯದ ಪೇಂಟಿಂಗ್ ಅನ್ನು ದಕ್ಷಿಣ ಮುಂಬೈನ ಗೋದಾಮಿನಿಂದ ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1992 ರಲ್ಲಿ ಖ್ಯಾತ ವರ್ಣಚಿತ್ರಕಾರ ಮಾಡಿದ ಪ್ರಕೃತಿ ಎಂಬ ಪೇಂಟಿಂಗ್ ಅನ್ನು ಅಸ್ತಗುರು ಆಕ್ಷನ್ ಹೌಸ್ ಪ್ರೈವೇಟ್ ಲಿಮಿಟೆಡ್‌ನ ಗೋದಾಮಿನಿಂದ ಕಳವು ಮಾಡಲಾಗಿದೆ ಎಂದು ಎಂಆರ್‌ಎ ಮಾರ್ಗ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರಿನ ಪ್ರಕಾರ, ಈ ವರ್ಷ ಪೇಂಟಿಂಗ್ ಮಾಲೀಕರು ಅದನ್ನು ಹರಾಜಿಗೆ ಇಡುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ, ಆದರೆ ಸುಮಾರು 1,500 ಕಲಾಕೃತಿಗಳ ಹುಡುಕಾಟದ ನಂತರ ಆ ಚಿತ್ರ ಗೋದಾಮಿನಲ್ಲಿ ಕಂಡುಬಂದಿಲ್ಲ ‌ಈ ಕಾರಣದಿಂದ ಪೇಂಟಿಂಗ್ ಕಾಣೆಯಾಗಿದೆ ಎಂದು ತಿಳಿದ ನಂತರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Also Read  ವಿಡಿಯೋ ಚಿತ್ರೀಕರಣ ಪ್ರಕರಣ..! - ಉಡುಪಿಗೆ ಆಗಮಿಸಿದ ಸಿಐಡಿ ತಂಡ

 

error: Content is protected !!
Scroll to Top