ವಿದ್ಯಾರ್ಥಿನಿ ಸೊಂಟಕ್ಕೆ ಗುಂಡು ಹಾರಿಸಿದ ವಿದ್ಯಾರ್ಥಿ..?

(ನ್ಯೂಸ್ ಕಡಬ) newskadaba.com ಬಿಹಾರ, ಸೆ. 11. ಪಿಸ್ತೂಲ್‌ನೊಂದಿಗೆ ಕೋಚಿಂಗ್ ಸೆಂಟರ್‌ಗೆ ಆಗಮಿಸಿದ ವಿದ್ಯಾರ್ಥಿಯೋರ್ವ, ಎದುರಿಗೆ ಕುಳಿತಿದ್ದ ವಿದ್ಯಾರ್ಥಿನಿಯ ಸೊಂಟಕ್ಕೆ ಗುಂಡು ಹಾರಿಸಿದ ಘಟನೆ ಬಿಹಾರದ ಮುಜಾಫರ್‌ಪುರ ನಗರದಲ್ಲಿ ನಡೆದಿದೆ.

ವರದಿಯ ಪ್ರಕಾರ ಕೋಚಿಂಗ್ ಸೆಂಟರ್ ನಲ್ಲಿ 11ನೇ ತರಗತಿಯ ಇಂಗ್ಲಿಷ್ ಕಲಿಸುತ್ತಿದ್ದ ಸಂದರ್ಭ ಗುಂಡೇಟಿನ ಸದ್ದು ಕೇಳಿಬಂದಿದ್ದು, ವಿದ್ಯಾರ್ಥಿನಿಯ ದೇಹದಿಂದ ರಕ್ತ ಸೋರುತ್ತಿತ್ತು. ಕೂಡಲೇ ಮನೆಯವರಿಗೆ ವಿಷಯ ತಿಳಿಸಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆಪ್ರತಿಕ್ರಿಯಿಸಿದ ಪೊಲೀಸ್ ಠಾಣೆ ಪ್ರಭಾರಿ ರಾಜು ಪಾಲ್ ಅವರು, 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ಬುಲೆಟ್‌ನಿಂದ ಗಾಯವಾಗಿದೆ. ಆಕಸ್ಮಿಕವಾಗಿ ಗುಂಡು ಹಾರಿದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಾರಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ತಿಳಿಸಲಾಗಿದೆ.

Also Read  ರಾಜ್ಯದ ಎರಡನೇ ಅತಿ ಎತ್ತರದ ಧ್ವಜಸ್ತಂಭ ಕದ್ರಿ ಪಾರ್ಕಿನಲ್ಲಿ ಅನಾವರಣ

 

error: Content is protected !!
Scroll to Top