5ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಅಂಶಿಕಾ ಜೈನ್

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 11.  ಕೆಲವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆದರೆ ಕೆಲವರು ಹಲವು ಪ್ರಯತ್ನಗಳ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ 5ನೇ ಬಾರಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಂಶಿಕಾ ಜೈನ್ ಅವರ ಯಶೋಗಾಥೆ ಇದು.

ದೆಹಲಿ ಮೂಲದವರಾದ ಅಂಶಿಕಾ ಜೈನ್ ಅವರು ತಮ್ಮ 5ನೇ ವಯಸ್ಸಿನಲ್ಲಿ ತನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಳ್ಳುತ್ತಾರೆ. ಬಳಿಕ ಅವರನ್ನು ಅಜ್ಜಿ ಮತ್ತು ಚಿಕ್ಕಪ್ಪ ಬೆಳೆಸುತ್ತಾರೆ. ಅಂಶಿಕಾ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆನ್ನುವುದು ಅವರ ಅಜ್ಜಿಯ ಕನಸಾಗಿತ್ತು. ಅಂಶಿಕಾ ಅವರ ಅಜ್ಜಿ ಶಿಕ್ಷಕಿಯಾಗಿದ್ದರಿಂದ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಶಿಕ್ಷಣದ ಮಹತ್ವವನ್ನು ಕಲಿಸಿದರು. ದುರದೃಷ್ಟವಶಾತ್, 2019 ರಲ್ಲಿ ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿರುವಾಗ ಅಂಶಿಕಾ ತನ್ನ ಅಜ್ಜಿಯನ್ನು ಕಳೆದುಕೊಂಡರು. ಇದರಿಂದ ಅವರು ಕುಗ್ಗದೆ ಪರೀಕ್ಷೆಗೆ ತನ್ನ ತಯಾರಿಯನ್ನು ಮುಂದುವರೆಸುತ್ತಾರೆ.  ಅಂಶಿಕಾ ಅವರು ನಾಲ್ಕು ಪ್ರಯತ್ನಗಳಲ್ಲಿ ಪರೀಕ್ಷೆಯನ್ನು ಭೇದಿಸಲು ವಿಫಲರಾಗುತ್ತಾರೆ. ಅಂತಿಮವಾಗಿ, 2022 ರಲ್ಲಿ 5ನೇ ಬಾರಿಕೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, 306ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಪಿಎಸ್ ಅಧಿಕಾರಿಯಾಗುತ್ತಾರೆ. ಅವರು 2023ರಲ್ಲಿ ಐಎಎಸ್ ಅಧಿಕಾರಿ ವಾಸು ಜೈನ್ ಅವರನ್ನು ವಿವಾಹವಾಗುತ್ತಾರೆ.

Also Read  ಬಿಜೆಪಿ ವತಿಯಿಂದ ಮರ್ದಾಳದಲ್ಲಿ ಸ್ವಚ್ಛತಾ ಕಾರ್ಯಕ್ರಮ...

error: Content is protected !!
Scroll to Top