ಕೆರೆಗೆ ಈಜಲು ಹೋದ ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 11.  ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈನಹಳ್ಳಿ ಗ್ರಾಮದಲ್ಲಿ ನಡೆದಿದೆ.

        

ಮೃತಪಟ್ಟ ವಿದ್ಯಾರ್ಥಿಯನ್ನು ಹಂದ್ರಾಳ ಗ್ರಾಮದ ಫಕೀರ ಗೌಡ ಎಂದು ಗುರುತಿಸಲಾಗಿದೆ. ಮೈನಹಳ್ಳಿಯ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಫಕೀರ ಗೌಡ ಮಂಗಳವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈಜಲು ಕೆರೆಗೆ ಹೋಗಿದ್ದ. ಆದರೆ ನೀರಿಗಿಳಿದ ವಿದ್ಯಾರ್ಥಿ ಮತ್ತೆ ಮೇಲೆ ಬಂದಿಲ್ಲ, ಇದನ್ನು ನೋಡಿದ ಇಬ್ಬರೂ ಸ್ನೇಹಿತರು ಶಾಲೆಗೆ ಓಡಿ ಹೋಗಿ ಶಿಕ್ಷಕರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಶಿಕ್ಷಕರು ಮತ್ತು ಮತ್ತಿಬ್ಬರು ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ.‌ ಆದರೆ ವಿದ್ಯಾರ್ಥಿಯು ಕೆಸರಿನಲ್ಲಿ ಸಿಲುಕಿಕೊಂಡ ಕಾರಣ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Also Read   ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಿ. ಹನುಮಂತಯ್ಯ ಆಯ್ಕೆ

 

error: Content is protected !!
Scroll to Top