77ನೇ ಸೀನಿಯರ್ ನ್ಯಾಷನಲ್ ಈಜು ಚಾಂಪಿಯನ್‌ಶಿಪ್‌  ಕರ್ನಾಟಕಕ್ಕೆ ಮೊದಲ ದಿನ 6 ಚಿನ್ನ , 3 ಬೆಳ್ಳಿಯ ಪದಕ                                                                                                                            *ಕರ್ನಾಟಕಕ್ಕೆ ಮೊದಲ ದಿನ 6 ಚಿನ್ನ , 3 ಬೆಳ್ಳಿಯ ಪದಕ*    

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11.  ನಗರದ ಎಮ್ಮೆಕೆರೆಯ ಅಂತರ್‌ರಾಷ್ಟ್ರೀಯ ಈಜುಕೊಳದಲ್ಲಿ ಆರಂಭಗೊಂಡ 77ನೇ ಸೀನಿಯರ್ ನ್ಯಾಷನಲ್ ಈಜು ಚಾಂಪಿಯನ್‌ಶಿಪ್‌ನ ಮೊದಲ ದಿನ 10 ಸ್ಪರ್ಧೆಗಳು ನಡೆದಿದ್ದು, ಕರ್ನಾಟಕ 6 ಚಿನ್ನ , 3 ಬೆಳ್ಳಿ ಬಾಚಿಕೊಂಡಿದೆ.


ಮಹಿಳೆಯರ 400 ಮೀಟರ್ ಫ್ರೀಸ್ಟೈಲ್‌ಲ್ಲಿ ಕರ್ನಾಟಕದ ಹಶಿಕಾ ರಾಮಚಂದ್ರ ಚಿನ್ನ ಪಡೆದರು. ಅಲ್ಲದೆ ಹದಿಮೂರು ವರ್ಷಗಳ ಹಿಂದಿನ ದಾಖಲೆ ಮುರಿಯುವ ಮೂಲಕ ರಾಷ್ಟ್ರೀಯ ಅವರು ದಾಖಲೆ ನಿರ್ಮಿಸಿದ ಹಶಿಕಾ ರಾಮಚಂದ್ರ ಅವರು 4:24.70 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಈ ಹಿಂದೆ ರಾಂಚಿಯ ರಿಚಾ ಮಿಶ್ರಾ (4:25.76) ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಹಶಿಕಾ ಮುರಿದರು. ತೆಲಂಗಾಣದ ವೃತ್ತಿ ಅಗರ್ವಾಲ್ (4:25.09) ಎರಡನೇ ಸ್ಥಾನ ಪಡೆದರು. ಎಮ್ಮೆಕೆರೆಯ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ಅಂತರ್‌ರಾಷ್ಟ್ರೀಯ ಈಜುಕೊಳದಲ್ಲಿ ಆರಂಭಗೊಂಡ ನಾಲ್ಕು ದಿನಗಳ ಈಜು ಚಾಂಪಿಯನ್‌ಶಿಪ್‌ಗೆ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಕರ್ನಾಟಕ ಈಜು ಸಂಸ್ಥೆಯ (ಕೆಎಸ್‌ಎ) ಅಧ್ಯಕ್ಷ ಗೊಪಾಲ್ ಬಿ.ಹೊಸೂರು ಮುಖ್ಯ ಅತಿಥಿಗಳಾಗಿದ್ದರು.

Also Read  ಸೈಂಟ್ ಜೋಕಿಮ್ಸ್ ಕಾಲೇಜು ಕಡಬ- ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

 

error: Content is protected !!
Scroll to Top