(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 11. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಶಿರ್ವ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜ ರವರು ಮಾನಸ ಶಾಲೆಯ ಅಧ್ಯಕ್ಷರಿಗೆ ದಿನಸಿ ವಸ್ತುಗಳನ್ನು ಹಸ್ತಾಂತರಿಸಿ, ಇಂತಹ ಸಾಮಾಜಿಕ ಕಾರ್ಯಕ್ರಮ ಹಮ್ಮಿ ಕೊಳ್ಳಲು ಮೂಲ ಪ್ರೇರಣೆ ಮತ್ತು ಮುಖ್ಯ ಉದ್ದೇಶ ದಿ. ಫಾ. ವಲೇರಿಯನ್ ಮೆಂಡೋನ್ಸಾ. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಮಾಜಮುಖಿ ಚಿಂತನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿ ನಮ್ಮನ್ನು ಪ್ರೇರೇಪಿಸಿದ್ದರು. ಇವರ ಆಗಲುವಿಕೆ ನನಗೆ ತುಂಬಲಾಗದ ನಷ್ಟವನ್ನು ಮಾಡಿದೆ. ಅದರ ಸಲುವಾಗಿ ಈ ಕಾರ್ಯಕ್ರಮದ ಎಲ್ಲ ಶ್ರೇಯಸ್ಸುದಿ. ಫಾ. ವಲೇರಿಯನ್ ಮೆಂಡೋನ್ಕಾ ಇವರಿಗೆ ಅರ್ಪಿಸುತ್ತೆನೆ. ಅವರಿಗೆ ಗೌರವ ಸಮರ್ಪಣೆಯಿಂದ ನಾವು ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಗ್ರಾಹಕರದ ಫೆಲಿಕ್ಸ್ ಫೆರ್ನಾಂಡಿಸ್, ಮೇರಿ ಡಿ ಸೋಜಾ ಮತ್ತು ಸೀಮಾ ಎಸ್ ಹಳ್ದಿಪುರ, ಡಾ. ಎಡ್ವರ್ಡ್ ಲೋಬೊ, ಮುಖ್ಯ ಶಿಕ್ಷಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.