ಕೊಯಿಲ-ರಾಮಕುಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಸೆ. 10. ಜಾತಿ ಸಂಘಟನೆಗಳ ಬಲವರ್ದನೆಯ ಪೈಪೋಟಿಯಿಂದಾಗಿ ಹಿಂದೂ ಸಮಾಜ ವಿಘಟನೆಯಾಗುತ್ತಿದೆ. ಜಾತ್ಯಾತೀತತೆಯ ಮೇಲೈಕೆ ಹೀಗೆ  ಮುಂದುವರಿದರೆ ಹಿಂದೂ ಸಮಾಜದ ಸಂಸ್ಕಾರ ಸಂಸ್ಕೃತಿಗಳು ಸರ್ವನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಹಿಂದೂ ಕಲ್ಪನೆಯಡಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ದೈವನರ್ತಕ, ಸಿವಿಲ್ ಇಂಜಿನಿಯಾರ್ ಡಾ.ರವೀಶ್ ಪಡುಮಲೆ ಹೇಳಿದರು. ಅವರು ಕೊಯಿಲ-ರಾಮಕುಂಜ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆತೂರು ಗಣೇಶ್ ನಗರದಲ್ಲಿ ಸೆ. 07 ಮತ್ತು ೦8ರಂದು ನಡೆದ  ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಎಂ ಸತೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ರಾಮನಾಯ್ಕ ಏಣಿತ್ತಡ್ಕ, ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಪದ್ಮಪ್ಪ ಗೌಡ, ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತೆಯಾದ  ಯುಕ್ತ ವಿ.ಜೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪದ್ಮಪ್ಪ ಗೌಡ ಮಾತನಾಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶರತ್ ಕೆದಿಲ ಸ್ವಾಗತಿಸಿದರು. ಗೌರವ ಸಲಹೆಗಾರ ಸದಾಶಿವ ಶೆಟ್ಟಿ ಮಾರಂಗ ವಂದಿಸಿದರು. ಲಕ್ಷ್ಮೀನಾರಾಯಣ ರಾವ್ ಆತೂರು ನಿರೂಪಿಸಿದರು.  ಸೆ. 07ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಟೆ, ವಿವಿಧ ಭಜನಾ ತಂಡಗಳಿಂದ ಭಜನೆ ಸೇವೆ, ಸಾರ್ವಜನಿಕ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ರಂಗಪೂಜೆ, ಬಳಿಕ ಧಾರ್ಮಿಕ ಸಭೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭೆಯಲ್ಲಿ ಪ್ರಗತಿಪರ ಕೃಷಿಕ ರಾಮ ನಾಯ್ಕ ಏಣಿತ್ತಡ್ಕ, ಆಲಂಕಾರು ಕೃಷಿಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಪದ್ಮಪ್ಪ ಗೌಡ, ನೀಟ್ ಪರೀಕ್ಷೆಯ ರ‍್ಯಾಂಕ್ ವಿಜೇತೆ ಯುಕ್ತ ವಿ ಜೆ ಅವರನ್ನು ಸನ್ಮಾನಿಸಲಾಯಿತು.

Also Read  ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ

ಸೆ. 08ರಂದು ಬೆಳಗ್ಗೆ ಶ್ರೀ ದೇವರಿಗೆ ಪೂಜೆ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿದ್ಯ, ಪುರುಷರ ಕಬಡ್ಡಿ ಪಂದ್ಯಾಟ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ  ಶ್ರೀ ದೇವರ ಶೋಭಯಾತ್ರೆ ಕೆಮ್ಮಾರದವರೆಗೆ ಸಾಗಿ ಕೆಮ್ಮಾರ ಹೊಳೆಯಲ್ಲಿ ಶ್ರೀ ದೇವರ ಜಲಸ್ಥಂಬನ ನಡೆಸಲಾಯಿತು. ಶೋಭಯಾತ್ರೆ ವೇಳೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ, ಕೀಳು ಕುದುರೆ , ಗೊಂಬೆಕುಣಿತ , ಕಪಿಲೇಶ್ವರ ಕಲಾ ಸಮಿತಿಯಿಂದ ಚೆಂಡೆ, ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗ ಮತ್ತು ಟೀಮ್ ಶಬರಿ ಪ್ರಾಯೋಕತ್ವದಲ್ಲಿ ಬಂಟ್ವಾಳ ಟೀಂ ರಾಮಾಂಜನೇಯ ಅವರಿಂದ ತಾಲೀಮು ಪ್ರದರ್ಶನ ಜನರಿಗೆ ವಿಶೇಷ ರಂಜನೆ ನೀಡಿತ್ತು.

error: Content is protected !!
Scroll to Top