ಕಂಟೈನರ್ ಲಾರಿ- ಕಾರು ಢಿಕ್ಕಿ: ಓರ್ವ ಮೃತ್ಯು..!  ಇಬ್ಬರು ಗಂಭೀರ ಗಾಯ                 

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 10.  ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಸೆ.9ರಂದು ಸಂಜೆ ಶಿರಾಡಿ ಘಾಟಿಯ ಕೆಂಪುಹೊಳೆ ಬಳಿ ನಡೆದಿದೆ.

ಮೃತರನ್ನು ಹಾಸನಿವಾಸಿ ಚಂದ್ರೇಗೌಡ (50) ಎಂದು ಗುರುತಿಸಲಾಗಿದೆ. ಅದೇ ಕಾರಿನಲ್ಲಿದ್ದ ಚಿನ್ನೇಗೌಡ (31) ಹಾಗೂ ಶೀಲಾ (40) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ರಸ್ತೆಯಲ್ಲೇ ತಿರುಗಿದ ಕಾರು ಅದರ ಹಿಂದಿದ್ದ ಹಾಸನದ ಕಡೆ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಇನ್ನೊಂದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿದುಬಂದಿದೆ.

Also Read  ಟ್ರೆಕ್ಕಿಂಗ್ ಹೋಗುವವರಿಗೆ ಬಿಗ್ ಶಾಕ್ ➤ ಮಾ. 01ರಿಂದ ಕುಮಾರಪರ್ವತ ಚಾರಣಕ್ಕೆ ನಿಷೇಧ

 

error: Content is protected !!
Scroll to Top