(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 09. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಡಿ ಸೇರಿಸಬೇಕೆಂಬ ಕೂಗಿನ ನಡುವೆಯೇ ಯುನಿಕೋಡ್ ಗೆ ‘ತುಳು- ತಿಗಳಾರಿ’ ಲಿಪಿ ಸೇರ್ಪಡೆಗೊಂಡಿದೆ. ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿಸಿದ ಬಳಿಕ ಇದೀಗ ಯುನಿಕೋಡ್ ನಲ್ಲೂ ತುಳು ಲಭ್ಯವಾಗುತ್ತಿರುವುದು ಮಹತ್ವಪೂರ್ಣ ಬೆಳವಣಿಗೆ.
ಯುನಿಕೋಡ್ ಅವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದ್ದು, ಸದ್ಯ 80 ಅಕ್ಷರಗಳನ್ನು ಸೇರಿಸಲಾಗಿದೆ. ಯುನಿಕೋಡ್ ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು ಟೆಕ್ಸ್ಟ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಇವೆಲ್ಲದಕ್ಕೂ ಸಾಧ್ಯವಾಗಲಿದೆ. ಗೂಗಲ್‌ನಲ್ಲಿ ಈಗಾಗಲೆ ಇಂಗ್ಲಿಟ್ ಟು ತುಳು ಅನುವಾದ ಒದಗಿರುವ ಕಾರಣ ಯುನಿಕೋಡ್ ನಲ್ಲಿ ಹಲವು ಸಾಧ್ಯತೆಗಳು ತೆರೆದುಕೊಳ್ಳುವ ನಿರೀಕ್ಷೆಯನ್ನು ಮೂಡಿಸಿದೆ ಎನ್ನಲಾಗಿದೆ.