ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಪ್ರಕಟ  ಕೆಎಲ್ ರಾಹುಲ್, ರಿಷಬ್ ಪಂತ್ ಗೆ ಸ್ಥಾನ

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 09.  ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಏತನ್ಮಧ್ಯೆ, ಬಿಸಿಸಿಐ ಭಾನುವಾರ ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಿದೆ.

ಭಾರತ ತಂಡಕ್ಕೆ ಕೆಎಲ್ ರಾಹುಲ್, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಮೊದಲ ಟೆಸ್ಟ್‌ಗೆ ಸೇರಿಸಿಕೊಳ್ಳಲಾಗಿದೆ. ಕಾರು ಅಪಘಾತದ ನಂತರ ಪಂತ್ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಟೆಸ್ಟ್ ಆಡಲಿದ್ದಾರೆ. ರಿಷಬ್ ಪಂತ್ 15 ತಿಂಗಳ ಕಾರು ಅಪಘಾತದ ನಂತರ ಕ್ರಿಕೆಟ್‌ಗೆ ಮರಳಿದರು. ಪಂತ್ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದು, ಬಳಿಕ 26ರ ಹರೆಯದ ಈ ವಿಕೆಟ್ ಕೀಪರ್ ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಪಾಲ್ಗೊಂಡಿದ್ದರು ಎನ್ನಲಾಗಿದೆ.

Also Read  ನೆಲ್ಯಾಡಿ ಬೆಥನಿ ಐಟಿಐ ರಜತೋತ್ಸವದ ಪ್ರಯುಕ್ತ ಶಟ್ಲ್ ಬ್ಯಾಡ್ಮಿಂಟನ್ ➤ ಮ್ಯಾನೇಜ್ಮೆಂಟ್ ತಂಡ ಪ್ರಥಮ

 

error: Content is protected !!
Scroll to Top