(ನ್ಯೂಸ್ ಕಡಬ) newskadaba.com ಖರ್ಟೋಮ್, ಸೆ. 09. ಸುಡಾನ್ ನ ಸೆನ್ನಾರ್ ನಗರದ ಜನನಿಬಿಡ ಮಾರುಕಟ್ಟೆಯಲ್ಲಿ ರಾಪಿಡ್ ಸಪೋರ್ಟ್ ಫೋರ್ಸ್ ಶೆಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಜೂನ್ ಅಂತ್ಯದಲ್ಲಿ ಆರ್‌ಎಸ್‌ಎಫ್ ಸೆನ್ನಾರ್ ರಾಜ್ಯದ ರಾಜಧಾನಿಯಾಗಿರುವ ಸಿಂಗಾವನ್ನು ವಶಪಡಿಸಿಕೊಂಡಿತು. ಆದರೆ ಸೆನ್ನಾರ್ ನಗರದ ನಿಯಂತ್ರಣಕ್ಕಾಗಿ ಸೈನ್ಯದೊಂದಿಗೆ ಹೋರಾಡುತ್ತಿದೆ. ಸುಡಾನೀಸ್ ಡಾಕ್ಟರ್ಸ್ ನೆಟ್‌ವರ್ಕ್ ತನ್ನ ಹೇಳಿಕೆಯಲ್ಲಿ, ಶೆಲ್ ದಾಳಿಯು ನಗರದ ಮುಖ್ಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ. ಇದನ್ನು ನಾಗರಿಕರ ‘ಹತ್ಯಾಕಾಂಡ’ ಎಂದು ಖಂಡಿಸಿದೆ. ಸಾವಿನ ಸಂಖ್ಯೆ 150 ಮೀರುವ ಸಾಧ್ಯತೆಯಿದೆ. ತರಕಾರಿ ಮತ್ತು ಮೀನು ಮಾರುಕಟ್ಟೆಗಳು, ಸಾರ್ವಜನಿಕ ಸಾರಿಗೆ ನಿಲ್ದಾಣ ಮತ್ತು ವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿಯಾಗಿದೆ ಎಂದು ಮಿಲಿಟರಿ ಮೂಲಗಳು ವರದಿ ತಿಳಿಸಿದೆ.