ಚಂದ್ರನ ಮೇಲೆ ಅಣುವಿದ್ಯುತ್ ಸ್ಥಾವರ ಸ್ಥಾಪನೆ  ಚೀನಾ, ರಷ್ಯಾದ ಜೊತೆ ಕೈ ಜೋಡಿಸಲಿರುವ ಭಾರತ

(ನ್ಯೂಸ್ ಕಡಬ) newskadaba.com  ಮುಂಬೈ, ಸೆ. 09.  ಇದು ಚಂದ್ರಸಂಧಾನ. ಎರಡು ಬದ್ಧ ಶತ್ರುರಾಷ್ಟ್ರಗಳೆನಿಸಿದ ಭಾರತ ಹಾಗೂ ಚೀನಾ, ರಷ್ಯಾದ ಜತೆ ಸೇರಿ ಚಂದ್ರನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಯ ಮಿಷನ್‍ಗೆ ಕೈಜೋಡಿಸುವ ಸಾಧ್ಯತೆ ಇದೆ ಎಂದು ಯುರೇಷಿಯನ್ ಟೈಮ್ಸ್, ರಷ್ಯಾದ ಅಧಿಕೃತ ಸುದ್ದಿಸಂಸ್ಥೆ ಟಾಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ರೋಸಟೋಮ್ ಮುಖ್ಯಸ್ಥ ಅಲೆಕ್ಸಿ ಲಿಖಚೇವ್ ಇದನ್ನು ಸ್ಪಷ್ಟಪಡಿಸಿದ್ದಾಗಿ ವರದಿ ತಿಳಿಸಿದೆ.

ರೋಸಟೋಮ್ ಎನ್ನುವುದು ರಷ್ಯಾದ ಸರ್ಕಾರಿ ವಿದ್ಯುತ್ ನಿಗಮವಾಗಿದ್ದು, ಭಾರತದ ಜತೆ ಸಹಯೋಗವನ್ನು ಹೊಂದಿದೆ. ರಷ್ಯಾದ ವ್ಲಾದಿವಸ್ಟೋಕ್‍ನಲ್ಲಿ ಇತ್ತೀಚೆಗೆ ನಡೆದ ಪೂರ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಲಿಖಚೇವ್, “ಅಂತರರಾಷ್ಟ್ರೀಯ ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ನಮ್ಮ ಚೀನಿ ಹಾಗೂ ಭಾರತೀಯ ಪಾಲುದಾರರು ಈ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ” ಎಂದು ಸ್ಪಷ್ಟಪಡಿಸಿದರು.

Also Read  ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು

 

error: Content is protected !!
Scroll to Top