ಮಂಗಳೂರು: ‘ಇಂಡಿಯನ್ ಫ್ರೆಶ್’ ಸಂಸ್ಥೆಯ ನೂತನ ಶಾಖೆ 7ನೇ ಇಂದು ಶುಭಾರಂಭ  

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 09.  ತಾಜಾ ಕೋಳಿ ಮಾಂಸ, ಮಟನ್ ಮಾಂಸ ಮತ್ತು ಫ್ರೋಝೆನ್ ಫುಡ್ಸ್ ಐಟಮ್ ಗಳ ಮಳಿಗೆ ‘ಇಂಡಿಯನ್ ಫ್ರೆಶ್’ ಸಂಸ್ಥೆಯ ನೂತನ ಶಾಖೆ ಮಂಗಳೂರಿನ ಮೋರ್ಗನ್ಸ್ ಗೇಟ್ ಜಂಕ್ಷನ್ ನ ಅರ್ಫಾ ಮಿರೇಜ್ ಟವರ್ ನ ತಳ ಅಂತಸ್ತಿನಲ್ಲಿ ಇಂದು ಶುಭಾರಂಭಗೊಂಡಿತು.


ಮಂಗಳೂರು ಹಿದಾಯ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಡಿಯನ್ ಚಿಕನ್ ಸಂಸ್ಥೆಯ ಮಾಲಕರು ವ್ಯಾಪಾರದಲ್ಲಿ ಪ್ರಾಮಾಣಿಕತೆಯೊಂದಿಗೆ ಬರುವ ಲಾಭದಲ್ಲಿ ಸ್ವಲ್ಪಭಾಗವನ್ನು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಮೀಸಲಿಡುತ್ತಿದ್ದಾರೆ. ಇದರಿಂದಾಗಿ ಅವರ ಸಂಸ್ಥೆ ಬೆಳೆಯುತ್ತಾ ಏಳನೇ ಶಾಖೆ ಆರಂಭಿಸಿದ್ದು, ಇದು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

Also Read  ಮೂಡಿಗರೆ : ಮನೆ ಮೇಲೆ ಉರುಳಿ ಬಿದ್ದ ಬೃಹತ್ ಮರ 

 

error: Content is protected !!
Scroll to Top