ಟಿಎಂಸಿ ಸದಸ್ಯ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮರು ಪರಿಶೀಲಿಸುವಂತೆ ಮಮತಾ ಬ್ಯಾನರ್ಜಿ ಮನವಿ

(ನ್ಯೂಸ್ ಕಡಬ) newskadaba.com  ಕೊಲ್ಕತ್ತಾ, ಸೆ. 09.  ನಗರದ ಆರ್‍ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರಣೆಯ ವಿಳಂಬವನ್ನು ಖಂಡಿಸಿ, ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಟಿಎಂಸಿ ಸದಸ್ಯ ಜವಾಹರ್ ಸರ್ಕಾರ್ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ ಎಂದು ವರದಿ ತಿಳಿದು ಬಂದಿದೆ.


ಪಕ್ಷದ ಅಧಿನಾಯಕಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದ ಸರ್ಕಾರ್, ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವುದಾಗಿ ಸ್ಪಷ್ಟಪಡಿಸಿದ್ದರು. ಜತೆಗೆ ರಾಜ್ಯವನ್ನು ರಕ್ಷಿಸುವಂತೆಯೂ ಆವರು ಆಗ್ರಹಿಸಿದ್ದರು. ದೆಹಲಿಗೆ ತೆರಳಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದರು. ಸೆಪ್ಟೆಂಬರ್ 11ರಂದು ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Also Read  ಹಿರಿಯ ನಟ ನಾಸೀರುದ್ದೀನ್​ ಶಾ ಆಸ್ಪತ್ರೆಗೆ ದಾಖಲು..!!

error: Content is protected !!
Scroll to Top