ಕೋಚಿಂಗ್ ಇನ್‌ ಸ್ಟಿಟ್ಯೂಟ್‌ ಗೆ ತೆರಳಿದ ವಿದ್ಯಾರ್ಥಿ ನಾಪತ್ತೆ..!

(ನ್ಯೂಸ್ ಕಡಬ) newskadaba.com  ಉಡುಪಿ, ಸೆ. 09.  ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ 13 ವರ್ಷದ ಆರ್ಯ ಎಂಬ ವಿದ್ಯಾರ್ಥಿಯನ್ನು ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಡ್ರಾಪ್ ಮಾಡಿ ಬಳಿಕ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

8 ನೇ ತರಗತಿಯ ವಿದ್ಯಾರ್ಥಿ ಆರ್ಯನನ್ನು ಆತನ ತಂದೆ ಪ್ರಕಾಶ್ ಶೆಟ್ಟಿ ಅವರು ಸೆಪ್ಟೆಂಬರ್ 8 ರ ಭಾನುವಾರ ಬೆಳಿಗ್ಗೆ ಇನ್‌ಸ್ಟಿಟ್ಯೂಟ್‌ ಗೆ ಡ್ರಾಪ್ ಮಾಡಿದ್ದಾರೆ, ಬಳಿಕ ತಂದೆ 2:45 ರ ಸುಮಾರಿಗೆ ಅವನನ್ನು ಕರೆದುಕೊಂಡು ಹೋಗಲು ಹಿಂದಿರುಗಿದಾಗ, ಆರ್ಯ ಎಲ್ಲಿಯೂ ಕಾಣಲಿಲ್ಲ. ಸಿಬ್ಬಂದಿಯನ್ನು ವಿಚಾರಿಸಿದಾಗ, ಆರ್ಯ ಆ ದಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಹಾಜರಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರ್ಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ ಎಂದು ವರದಿ ತಿಳಿಸಿದೆ.

Also Read  ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ASI..!!   ➤ ASI ಅಮಾನತು

error: Content is protected !!
Scroll to Top