(ನ್ಯೂಸ್ ಕಡಬ) newskadaba.com ಮುಂಬಯಿ, ಸೆ. 07. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಅವರು ಮೂಂಬೈನಲ್ಲಿರುವ ಪ್ರಸಿದ್ದ ಲಾಲ್ಬಾಗ್ ಚಾ ರಾಜ ವಿನಾಯಕನಿಗೆ 15 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ. ಇಲ್ಲಿ 10 ದಿನಗಳ ಕಾಲ ಗಣೇಶ ವಿಗ್ರಹವನ್ನು ಪೂಜಿಸಲಾಗುತ್ತದೆ. ಈ ವೇಳೆ ಮುಂಬೈನ ಉದ್ಯಮಿಗಳು, ಚಲನಚಿತ್ರದ ನಟ ನಟಿಯರು, ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯುತ್ತಾರೆ.
ಗಣೇಶ ಹಬ್ಬ- 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ
