ಸರಕಾರಿ ಮಹಿಳಾ ಐಟಿಐ- ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 07. ಮಂಗಳೂರಿನ ಸರ್ಕಾರಿ ಐಟಿಐ ಮಹಿಳಾ ಸಂಸ್ಥೆಯಲ್ಲಿ ತರಬೇತಿಗಾಗಿ ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಕರ್ನಾಟಕದಲ್ಲಿ 5 ವರ್ಷ ವ್ಯಾಸಂಗ ಮಾಡಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಸೆಪ್ಟೆಂಬರ್ 30ರ ವರೆಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಸೀಟುಗಳ ವಿವರ :-

ಎಲೆಕ್ಟ್ರಾನಿಕ್ ಮೆಕ್ಯಾನಿಕ್ ತರಬೇತಿ- ಅವಧಿ 2 ವರ್ಷ, ಖಾಲಿ ಇರುವ ಸೀಟುಗಳು 18.
ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ – ತರಬೇತಿ ಅವಧಿ ಎರಡು ವರ್ಷ, ಖಾಲಿ ಇರುವ ಸೀಟುಗಳು 8.
ಎಲೆಕ್ಟ್ರಿಷಿಯನ್ – ತರಬೇತಿ ಅವಧಿ 2ವರ್ಷ ಖಾಲಿ ಇರುವ ಸೀಟುಗಳು 7.
ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – ತರಬೇತಿ ಅವಧಿ 1 ವರ್ಷ, ಖಾಲಿ ಇರುವ ಸೀಟುಗಳು 37.
ಇಂಡಸ್ಟ್ರಿಯಲ್ ರೋಬೋಟಿಕ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ – ತರಬೇತಿ ಅವಧಿ 1 ವರ್ಷ, ಖಾಲಿ ಇರುವ ಸೀಟುಗಳು 20.
ಹೆಚ್ಚಿನ ಮಾಹಿತಿಗೆ ಪ್ರಾಚಾರ್ಯರು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಶರಬತ್ ಕಟ್ಟೆ, ಕದ್ರಿ  (ದೂರವಾಣಿ- 9880119147, 9448858417) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಸೂಚನೆ

error: Content is protected !!
Scroll to Top