ಹಬ್ಬಗಳ ಹಿನ್ನೆಲೆ ಕಡಬ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 07. ಗಣೇಶೋತ್ಸವ, ಈದ್ ಮಿಲಾದ್ ಹಾಗೂ ಮೇರಿ ಮಾತೆಯ ಜನ್ಮದಿನ ಆಚರಣೆ ವೇಳೆ ಸಾರ್ವಜನಿಕವಾಗಿ ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಡಬ ಠಾಣೆಯಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಧಾರ್ಮಿಕ ಪ್ರಮುಖರ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ಠಾಣಾ ಎಸ್ಐ ಅಭಿನಂದನ್ ಎಂ.ಎಸ್, ಹಬ್ಬಗಳನ್ನು ಯಾವುದೇ ಅಡೆತಡೆಗಳು ಬಾರದಂತೆ ಸುಸೂತ್ರವಾಗಿ ನಡೆಯಬೇಕೆಂಬ ಉದ್ದೇಶದಿಂದ ಸರಕಾರವು ಹಲವು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಹಬ್ಬಗಳ ಮೆರವಣಿಗೆ ವೇಳೆ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಸಂಘಟಕರು ಹೆಚ್ಚಿನ ಮುತುವರ್ಜಿ ವಹಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದ ಅವರು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಉತ್ಸವಗಳನ್ನು ಆಚರಿಸುವಂತೆ ಮನವಿ ಮಾಡಿದರು.

Also Read  ಸುಳ್ಯ: ಕಳ್ಳತನ ಪ್ರಕರಣದ ಆರೋಪ ಸಾಬೀತು; ಇಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್


ಗಣೇಶನ ವಿಗ್ರಹ ವಿಸರ್ಜನೆ ಸಹಿತ ಯಾವದೇ ಮೆರವಣಿಗೆ ವೇಳೆ ಡಿಜೆಗೆ ಅವಕಾಶವಿಲ್ಲ. ನಿಯಮ ಮೀರಿ ಡಿಜೆ ಬಳಸಿದಲ್ಲಿ ಧ್ವನಿವರ್ಧಕ ಸಲಕರಣೆಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾಲಕರ ಮತ್ತು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು. ಸಭೆಯಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಧಾರ್ಮಿಕ ಸಂಘಟನೆಗಳ ಪ್ರಮುಖರಾದ ನಾರಾಯಣ ಶೆಟ್ಟಿ ಅತ್ಯಡ್ಕ, ಸತೀಶ್ ಎರ್ಕ ಬಿಳಿನೆಲೆ, ಪಿ.ಪಿ ವರ್ಗೀಸ್, ಅಶ್ರಫ್ ಶೇಡಿಗುಂಡಿ, ಕಿಶನ್ ಕುಮಾರ್ ರೈ, ದಯಾನದಂದ ಗೌಡ ಆರಿಗ, ಹನೀಫ್ ಕೆ.ಎಂ, ಹಾರಿಸ್ ಕಳಾರ, ರಮ್ಲ ಕಳಾರ, ವಿಕ್ಟರ್ ಮಾರ್ಟಿಸ್, ರೆಬೇಕಾ, ಫಾರೂಕ್ ಅಮೈ, ಸಿದ್ದೀಕ್ ಆತೂರು, ಹಸೈನಾರ್ ಕುಂತೂರು, ರೋಯ್ ಅಬ್ರಹಾಂ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top