ಮಂಗಳೂರು ಏರ್ಪೋರ್ಟ್ ರನ್ ವೇ ತಪಾಸಣೆಗೆ ಕಾರ್ಯಪಡೆ ರಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ಪರೀಕ್ಷಾ ಕಾರ್ಯಪಡೆಯನ್ನು ರಚಿಸಲಾಗಿದ್ದು, ಏರ್ ಪೋರ್ಟ್ ಸರ್ಫೇಸ್ ಫ್ರಿಕ್ಷನ್ ಟೆಸ್ಟರ್ ಯಂತ್ರಗಳ ಮೂಲಕ ತಪಾಸಣೆಯು ನಡೆಯಲಿದೆ.

ತಂಡದಲ್ಲಿ ಪ್ರಭಾಕರನ್ ಸುಂದರಂ, ಶೆಫಾಲಿ ಮಲ್ದಾರ್ ಮತ್ತು ಪ್ರಸನ್ನ ರಾಜೇಂದ್ರನ್ ಒಳಗೊಂಡ ಇಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಗಳಿದ್ದಾರೆ. ಫಿನ್ ಲ್ಯಾಂಡ್ ನಿಂದ ಆಮದು ಮಾಡಲಾದ   ಎೆಸ್ಎಫ್.ಟಿ ಉಪಕರಣದೊಂದಿಗೆ ರನ್ ವೇಯಲ್ಲಿ ತಪಾಸಣೆ ನಡೆಸಲು ಮತ್ತು ಮಾಪನಾಂಕ ನೀಡಲು ಪ್ರಮಾಣೀಕರಿಸಲಾಗಿದೆ. ವಿಮಾನಗಳು ಚಲಿಸುವಾಗ ಚಕ್ರಗಳಲ್ಲಿನ ರಬ್ಬರ್ನ ಅವಶೇಷವನ್ನು ಉಳಿಸುವ ಹಿನ್ನೆಲೆ ರನ್ ವೇ ಜಾರಲು ಕಾರಣವಾಗುತ್ತದೆ. ಹೀಗಾಗಿ ರನ್ ವೇ ಜಾರುವಿಕೆ ಮತ್ತು ಘರ್ಷಣೆಯ ಪ್ರಮಾಣವನ್ನು ಅಳೆಯಲು ಎಎಸ್ಎಫ್.ಟಿ ವಾಹನ ಬಳಸಲಾಗುತ್ತದೆ.

error: Content is protected !!
Scroll to Top