(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 6. ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಮೇಲೆ ಯಾವುದೇ ತರಹದ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಕೂಡ ತುಂಗಭದ್ರಾ ಜಲಾಶಯದ ಮೇಲಿನ ಪ್ರೀ ವೆಡ್ಡಿಂಗ್ ಫೋಟೋ ವೈರಲ್ ಆಗಿದೆ ಎಂದು ವರದಿಯಾಗಿದೆ.
ಬೆಂಗಳೂರು ಪಾಸಿಂಗ್ ಕಾರನ್ನು ಜಲಾಶಯ ಮೇಲ್ಭಾಗದಲ್ಲಿ ಕಾರು ತೆಗೆದುಕೊಂಡು ಹೋಗಿ, ಅಲ್ಲಿ ಕಾರಿನ ಮುಂದೆ ಮತ್ತು ಮೇಲೆ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ನಿಷೇಧ ಇದ್ದರೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹೇಗೆ ನಡೆಯಿತು. ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಅಧಿಕಾರಿಗಳು ಅನುಮತಿ ನೀಡಿದ್ರಾ ಎಂಬ ಪ್ರಶ್ನೆಗಳು ಹುಟ್ಟಿದೆ. ಯಾವಾಗ ಫೋಟೋ ಶೂಟ್ ಆಗಿದೆ, ಪರವಾನಿಗೆ ನೀಡಿದವರು ಯಾರು ಎಂಬುವುದರ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.