(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಫೆ.28. ವ್ಯಕ್ತಿರ್ಯೋರ್ವನನ್ನು ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆಗೈದ ಘಟನೆ ಪಡುಬಿದ್ರೆಯ ಕಾಂಜರಕಟ್ಟೆಯ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಪಡುಬಿದ್ರೆಯ ಕಾಂಜರಕಟ್ಟೆ ನಿವಾಸಿ ನವೀನ್ ಡಿಸೋಜ(42) ಎಂದು ಗುರುತಿಸಲಾಗಿದೆ. ಕಾಂಜರಕಟ್ಟೆಯ ಬಾರ್ ಬಳಿ ನಿಂತಿದ್ದ ನವೀನ್ ರವರನ್ನು ಕಾರೊಂದರಲ್ಲಿ ಆಗಮಿಸಿ ತಂಡ ಚೂರಿಯಿಂದ ಇರಿದು ಕೊಲೆಗೈದು ಸ್ಥಳದಿಂದ ಪರಾರಿಯಾಗಿದೆ. ಹಳೇಯ ವೈಷಮ್ಯ ಘಟನೆಗೆ ಕಾರಣ ಕಾರಣವಾಗಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ, ಕಾಪು ವೃತ್ತ ನಿರೀಕ್ಷಕ ಹಾಲ್ ಮೂರ್ತಿ ರಾವ್, ಪಡುಬಿದ್ರೆ ಠಾಣಾಧಿಕಾರಿ ಸತೀಶ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.