ಮಂಗಳೂರು: ಮಂಗಳ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳ ಅದ್ದೂರಿ ಪದವಿ ಪ್ರಧಾನ ಸಮಾರಂಭ

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 6. ಮಂಗಳ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳಾದ ನ್ಯೂ ಮಂಗಳ ಕಾಲೇಜ್ ಆಫ್ ನರ್ಸಿಂಗ್, ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಸ್, ಮಂಗಳ ಕಾಲೇಜ್ ಆಫ್ ಪಾರಾಮೆಡಿಕಲ್ ಸೈನ್ಸ್ ಸ್, ಮಂಗಳ ಸ್ಕೂಲ್ ಆಫ್ ನರ್ಸಿಂಗ್, ಮಂಗಳ ಕಾಲೇಜ್ ಆಫ್ ಫಿಸಿಯೊತೆರಪಿ ಕಾಲೇಜುಗಳ ಪದವಿ ಪ್ರಧಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ಜರುಗಿತು.

ಈ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಡಾ. ಜಿ. ಅರುಣ್ ಮಯ್ಯ, ಪ್ರೋಫೆಸರ್ ಮತ್ತು ಡೀನ್ (ಫಿಸಿಯೋತೆರಪಿ) ಎಂ.ಸಿ.ಎಚ್.ಪಿ. ಮಾಹೆ, ಮಣಿಪಾಲ್, ದೀಪ ಬೆಳಗಿಸಿ ಮಾತನಾಡಿದ ಇವರು ನೂತನ ಪದವಿದರರನ್ನು ಉದ್ದೇಶಿಸಿ ವೃತ್ತಿ ಜೀವನದಲ್ಲಿ ಒಳ್ಳೆಯ ಉದ್ದೇಶ(ನಿಲುವು), ಕೌಶಲ್ಯವನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಸ್ಥಾಪಕಾದ್ಯಕ್ಷರಾದ ಡಾ. ಗಣಪತಿ ಪಿ ಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ವೃತ್ತಿ ಜೀವನದಲ್ಲಿ ತಾಳ್ಮೆ, ಪರಿಶ್ರಮ, ಕಾರ್ಯಕ್ಷಮತೆಯನ್ನು ಅಳವಡಿಸಿಕೊಂಡರೆ ವೈಯುಕ್ತಿಕ ಮತ್ತು ಆರೋಗ್ಯ ಕ್ಷೇತದಲ್ಲಿ ಯಶಸ್ಸನ್ನು ಗಳಿಸುವುದರ ಮೂಲಕ ಹೊರ ಜಗತ್ತಿನಲ್ಲಿ ತಮ್ಮ ಇರುವಿಕೆಯನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿ ನೂತನ ಪದವೀದರರಿಗೆ ಶುಭ ಹಾರೈಸಿದರು.

Also Read  ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಲಾರಿ..! ➤ ಕೆಲಕಾಲ ಸಂಚಾರ ವ್ಯತ್ಯಯ

ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮೂಹ ಸಂಸ್ಥೆಗಳ 328 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ, ಚಿನ್ನದ ಪದಕ ಪಡೆದ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ಸ್ ನ 7 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 5 ಅಕಾಡೆಮಿಕ್ ಟಾಪರ್, 7 ರ‍್ಯಾಂಕ್ ಪಡೆದ ವಿದ್ಯಾರ್ಥಿ ಮತ್ತು 5 ಬೆಸ್ಟ್ ಔಟ್ ಗೋಯಿಂಗ್ ವಿದ್ಯಾರ್ಥಿಗಳನ್ನು ಕೂಡ ಗೌರವಿಸಲಾಯಿತು.

Also Read  ಹೊಳಪು-2019  ಕ್ರೀಡಾಕೂಟ

 

 

error: Content is protected !!
Scroll to Top