‘ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಕರಾಟೆ ಪೂರಕ’: ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 6. ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಕರಾಟೆ ಪೂರಕವಾಗಿದೆ. ಆತ್ಮರಕ್ಷಣೆಯ ಕಲೆಯಾಗಿರುವ ಕರಾಟೆ ಇವತ್ತು ಜೀವಂತವಾಗಿ ಉಳಿದಿದ್ದರೆ ಮಕ್ಕಳ ಹೆತ್ತವರು, ಗುರು ಹಿರಿಯರು ಅದಕ್ಕೆ ಕಾರಣ. ಹೆತ್ತವರು ಮಕ್ಕಳಲ್ಲಿ ಕರಾಟೆಗೆ ಆಸಕ್ತಿ ಬೆಳೆಸಿ, ಅವರಿಗೆ ಪ್ರೋತ್ಸಾಹ ನೀಡುವುದರಿಂದ ಇದು ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಿಸಿದ್ದಾರೆ.


ಸೆಲ್ಫ್ ಡಿಫೆನ್ಸ್ ‘ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ಇದರ ಆಶ್ರಯದಲ್ಲಿ ನಗರದ ಕುಲಶೇಖರದ ಕೋರ್ಡೆಲ್ ಚರ್ಚ್ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶೌರ್ಯ ಅಂತರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಂಗಳೂರಿನ ಮಕ್ಕಳು ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಬೇಕಾದರೆ ಎರಡು -ಮೂರು ಲಕ್ಷ ರೂ. ಖರ್ಚು ಮಾಡಬೇಕಾಗಿತ್ತು. ಆದರೆ ಇದೀಗ ಅವರ ಕಾಲಬುಡದಲ್ಲೇ ಈ ಅವಕಾಶ ಒದಗಿಬಂದಿದೆ ಎಂದು ಖಾದರ್ ಹೇಳಿದರು. ಮಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಕರಾಟೆ ಸಂಘಟಿಸುವ ಮೂಲಕ ಮೂಲಕ ಮಂಗಳೂರಿನ ಸಂಸ್ಕೃತಿ, ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಆಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಮನಪಾ ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಶುಭ ಹಾರೈಸಿ ಮಾತನಾಡಿ, ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಮಹಾನಗರ ಪಾಲಿಕೆ 10 ಲಕ್ಷ ರೂ. ದೊರಕಿಸಿ ಕೊಡುವ ಭರವಸೆ ನೀಡಿದರು ಎಂದು ವರದಿಯಾಗಿದೆ.

Also Read  ಖಾಸಗಿ ಬಸ್ ನಿರ್ವಾಹಕರ ನಡುವೆ ಜಗಳ  ಇಬ್ಬರು ಅರೆಸ್ಟ್     

 

error: Content is protected !!
Scroll to Top