ಶಂಕಿತ ಉಗ್ರರಿಂದ ರಾಕೆಟ್ ದಾಳಿ 2 ಕಟ್ಟಡಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com  ಇಂಫಾಲ, ಸೆ. 6. ಮಣಿಪುರ ಬಿಷ್ಣುಪುರ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಶಂಕಿತ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 2 ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚುರ್ ಚಂದಾಪುರ ಜಿಲ್ಲೆಯ ಗುಡ್ಡ ಪ್ರದೇಶದಿಂದ ಜನವಸತಿ ಇರುವ ಟ್ರೋಂಗ್‌ ಲಾವೋಬಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಶಂಕಿತ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ. 3 ಕಿ.ಮೀ ದೂರ ಹಾರಬರಲ್ಲ ಸಾಮರ್ಥ್ಯದ ಲಾಂಚರ್ ಬಳಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ದಾಳಿಯಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ಆದರೆ ಸ್ಥಳದಲ್ಲಿದ್ದ ಸಮುದಾಯ ಭವನ ಹಾಗೂ ಖಾಲಿ ಕಟ್ಟಡವೊಂದಕ್ಕೆ ಹಾನಿ ಉಂಟಾಗಿದೆ. ಇದರೊಂದಿಗೆ ಶಂಕಿತ ಉಗ್ರರು ಬಿಷ್ಣುಪುರ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಹಲವು ಸುತ್ತಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ ಎನ್ನಲಾಗಿದೆ.

Also Read   ಬ್ರೆಜಿಲ್ ನಲ್ಲಿ ವಿಮಾನ ಪತನ..!          62 ಮಂದಿ ಸಜೀವ ದಹನ ಭೀಕರ ದೃಶ್ಯ..!                                  

 

error: Content is protected !!
Scroll to Top