(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 06. ಚಲಿಸುವ ರೈಲಿಗೆ ಕಲ್ಲು ಎಸೆಯುವುದು, ರೈಲು ಹಳಿಗಳ ಮೇಲೆ ಕಲ್ಲು ಇಡುವುದು ಅಥವಾ ಮಣ್ಣು ಸುರಿಯುವುದು ದಂಡಾರ್ಹ ಅಪರಾಧವಾಗಿದೆ ಎಂದು ಮಂಡ್ಯ ರೈಲ್ವೇ ರಕ್ಷಣಾ ದಳದ ನಿರೀಕ್ಷಕ ಎಸ್.ಗೋವಿಂದರಾಜು ತಿಳಿಸಿದ್ದಾರೆ. ತಾಲೂಕಿನ ಯಲಿಯೂರು ಗ್ರಾಮದ ಶ್ರೀಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರೈಲ್ವೆ ಸುರಕ್ಷಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈಲ್ವೇ ನಿಯಮಗಳಿಗೆ ವಿರುದ್ಧವಾಗಿ ಕೃತ್ಯಗಳನ್ನೆಸಗುವುದು ರೈಲ್ವೇ ಅಧಿನಿಯಮ-2003ರ ಪ್ರಕಾರ ದಂಡನೀಯ ಅಪರಾಧವಾಗಿರುತ್ತವೆ. ಎಲ್ಲೆಂದರಲ್ಲಿ ರೈಲು ಹಳಿಗಳನ್ನು ಸಹ ದಾಟುವಂತಿಲ್ಲ. ರೈಲುಗಳು ಮತ್ತು ರೈಲ್ವೇ ಹಳಿಗಳು ಸಾರ್ವಜನಿಕ ಆಸ್ತಿ. ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.