ಮಂಗಳೂರು ವಿ.ವಿ.ಯಲ್ಲಿ ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಯು.ಆರ್ ರಾವ್ ಸಭಾಂಗಣದಲ್ಲಿ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಸಚಿವ ರಾಜು ಕೆ. ಮೊಗವೀರ, ವಿಶ್ವದ ಯಾವುದೇ ವಿಶ್ವ ವಿದ್ಯಾಲಯಗಳ ನಿಜವಾದ ನಿರ್ಮಾತೃರು ಅಲ್ಲಿನ ಶಿಕ್ಷಕರು. ಪ್ರಸಕ್ತ ಶಿಕ್ಷಣವು, ವಿದ್ಯಾರ್ಥಿಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಕಲ್ಪನೆಗೂ ಮೀರಿದ ಉತ್ತರಗಳನ್ನು ಕಂಡುಕೊಳ್ಳಲು ಹೊಸ ಸಾಧ್ಯತೆಗಳನ್ನು ತರೆದಿಡುವ ಮೂಲಕ ವ್ಯಕ್ತಿತ್ವ ವಿಕಾಸದೆಡೆಗೆ ಗಮನಹರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ, ಪಿ.ಎಲ್ ಧರ್ಮ ಅವರು ತಮ್ಮ ವಿದ್ಯಾರ್ಥಿ ಜೀವನ ಮತ್ತು ವಿವಿ ಯಲ್ಲಿನ ಸಹ ಶಿಕ್ಷಕರ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು, ತರಗತಿಗಳು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಿರುವ ಈ ಸಂದರ್ಭದಲ್ಲಿ ಶಿಕ್ಷಕರು ತಮ್ಮ ಮೌಲ್ಯಗಳನ್ನು ಮರೆಯಬಾರದು, ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳನ್ನು ಕೇಳುವ ಮನೋಭಾವ ಬೆಳಸುವುದರೊಂದಿಗೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವೂ ಶಿಕ್ಷಕನ ಗುರಿಯಾಗಿದೆ ಎಂದರು.

Also Read  ಪೆರಿಯಡ್ಕದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಸಮಾರಂಭದಲ್ಲಿ ನಿವೃತ್ತ ಹಿರಿಯ ಪ್ರಾಧ್ಯಾಪಕರುಗಳಾದ ಡಾ. ಶಿವಣ್ಣ, ಡಾ.ಮಂಜುನಾಥ್ ಪಟ್ಟಾಭಿ, ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಅನುಸೂಯ ರೈ, ಡಾ. ಉಷಾ ಕೆ.ಎಂ, ಮತ್ತು ಡಾ. ಕೆ. ಆರ್ ಶಾನಿ ಅವರ ಸೇವೆಯನ್ನು ಸ್ಮರಿಸಿ, ಸನ್ಮಾನಿಸಿ ಗೌರವಿಸಲಾಯಿತು. 2024ನೇ ಸಾಲಿನಲ್ಲಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಪೇಟೆಂಟ್ ಪಡೆದ ಸಾಧಕ ಪ್ರಾಧ್ಯಾಪಕರಾದ ಡಾ. ಜಗದೀಶ್ ಪ್ರಸಾದ್ ಮತ್ತು ಡಾ. ಭೋಜ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಗಣೇಶ್ ಸಂಜೀವ ಸ್ವಾಗತಿಸಿ, ವಿವಿ ಹಣಕಾಸು ಅಧಿಕಾರಿ ಪ್ರೊ. ವೈ. ಸಂಗಪ್ಪ ವಂದಿಸಿದರು. ಕನ್ನಡ ವಿಭಾಗದ ಡಾ. ಧನಂಜಯ್ ಕುಂಬಳೆ ನಿರೂಪಿಸಿದರು.

error: Content is protected !!
Scroll to Top