ಪುತ್ತೂರು: `ವಿಶ್ವ ವಜ್ರ-ಡೈಮಂಡ್ ಎಕ್ಷಿಬಿಷನ್’ ವಜ್ರಾಭರಣಗಳ ಪ್ರದರ್ಶನ ಮೇಳಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com  ಪುತ್ತೂರು, ಸೆ. 6. ನಗರದ ಏಳ್ಮುಡಿ ಎಂಬಲ್ಲಿರುವ ತಾಜ್ ಟವರ್‍ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೆ. 5ರಿಂದ 15ರ ತನಕ ನಡೆಯಲಿರುವ `ವಿಶ್ವ ವಜ್ರ-ಡೈಮಂಡ್ ಎಕ್ಷಿಬಿಷನ್’ ವಜ್ರಾಭರಣಗಳ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಲಾಯಿತು.


ವಜ್ರಾಭರಣಗಳ ಪ್ರದರ್ಶನವನ್ನು ವೈದ್ಯೆ ಡಾ.ಹಬೀನಾ ಶಾಯಿರಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುಲ್ತಾನ್ ಮಳಿಗೆಯಲ್ಲಿ ಅಭರಣಗಳ ಸಾಕಷ್ಟು ಆಭರಣ ಸಂಗ್ರಹವಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ಸೇವೆಯೂ ಉತ್ತಮ ವಾಗಿದ್ದು, ಗ್ರಾಹಕರಿಗೆ ಸಂತೃಪ್ತಿಯನ್ನು ನೀಡುವಂತಿದೆ. ಮಳಿಗೆಯಲ್ಲಿನ ಎಲ್ಲರೂ ಪ್ರಶಂಸನೀಯ ಸೇವೆ ನೀಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಡಿಸೋಜ ಅವರು ನಾನು ಕಳೆದ 3 ವರ್ಷಗಳಿಂದ ಈ ಮಳಿಗೆಯಲ್ಲಿನ ಗ್ರಾಹಕಿ ಆಗಿದ್ದೇನೆ. ಇಲ್ಲಿ ಖರೀದಿಸಿದ ಚಿನ್ನಾಭರಣಗಳು ನನಗೆ ತೃಪ್ತಿ ನೀಡಿದೆ. ಗ್ರಾಹಕರು ಈ ಸಂಸ್ಥೆಗೆ ಹೆಚ್ಚಿನ ಬೆಂಬಲ ನೀಡಬೇಕು. ಆ ಮೂಲಕ ಸುಲ್ತಾನ್ ಗೋಲ್ಡ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.

Also Read  ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ 568 ಮಂದಿ ಮೃತ್ಯು

 

 

error: Content is protected !!
Scroll to Top