ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ರವರಿಗೆ ಮಂಗಳೂರು ಕಮ್ಯೂನಿಟಿ ಸೆಂಟರ್ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com  ಉಳ್ಳಾಲ, ಸೆ. 6. ಸರಕಾರಿ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮತ್ತೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶನ, ತರಬೇತಿ, ಪ್ರೇರಣಾ ತರಗತಿಗಳನ್ನು ನೀಡುತ್ತಿರುವ ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ರನ್ನು ನಮ್ಮ ನಾಡ ಒಕ್ಕೂಟ ಮಂಗಳೂರು ಕಮ್ಯೂನಿಟಿ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಎನ್ ಎನ್ ಒ ಜಿಲ್ಲಾಧ್ಯಕ್ಷ ಡಾ ಆರಿಫ್ ಮಸೂದ್, ಎನ್ ಎನ್ ಒ ಟ್ರಸ್ಟಿ ಗಳಾದ ಹಮೀದ್ ರಾಯಲ್ ಮೂಡುಬಿದಿರೆ, ಮುಹಮ್ಮದ್ ಹುಸೇನ್ ಕಾರ್ಕಳ, ನ್ಯಾಯವಾದಿ ಶೇಕ್ ಇಸಾಕ್ , ಹ್ಯೂಮನಿಟಿ ಫೌಂಡೇಶನ್ ಅಧ್ಯಕ್ಷ ನಾಸಿರ್ ಅಹ್ಮದ್ ಸಾಮಾಣಿಗೆ, ಎನ್ ಎನ್ ಒ ಮಂಗಳೂರು ತಾಲೂಕು ಅಧ್ಯಕ್ಷ ರಾಝಿಕ್ ಅಲಿ, ನ್ಯಾಯವಾದಿ ಫೈಝಲ್ ಮತ್ತು ಸಮದ್ ಸ್ಮಾರ್ಟ್ ಸಿಟಿ ಉಪಸ್ಥಿತರಿದ್ದರು.

Also Read  ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅತಿಥಿ ಶಿಕ್ಷಕರು/ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

 

error: Content is protected !!
Scroll to Top