ಉಡುಪಿ: ನೂತನ ಬೀದಿ ದೀಪಗಳನ್ನು ಉದ್ಘಾಟಿಸಿದ ಶಾಸಕ ಯಶ್‌ ಪಾಲ್ ಸುವರ್ಣ

(ನ್ಯೂಸ್ ಕಡಬ) newskadaba.com  ಉಡುಪಿ, ಸೆ. 6.  ನಗರಸಭಾ ವ್ಯಾಪ್ತಿಯ ಮಣಿಪಾಲ- ಪರ್ಕಳ ಮುಖ್ಯರಸ್ತೆಯಲ್ಲಿ ನೂತನವಾಗಿ ಅಳವಡಿಸಲಾದ ಬೀದಿ ದೀಪಗಳ ಉದ್ಘಾಟನೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಯಶ್ ಪಾಲ್ ಸುವರ್ಣ, ಗೌರಿ ಗಣೇಶ ಹಬ್ಬದ ಶುಭ ಸಂದರ್ಭ ಬೀದಿ ದೀಪದ ಉದ್ಘಾಟನೆಯ ಮೂಲಕ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಉಡುಪಿ ಕರಾವಳಿ ಬೈಪಾಸಿನಿಂದ ಪರ್ಕಳ ಗಡಿಭಾಗದವರೆಗೆ ದಾರಿ ದೀಪ ವ್ಯವಸ್ಥೆ ಪೂರ್ಣಗೊಂಡಿದ್ದು ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಅಂದಾಜು 117 ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಸುಮಾರು ರೂ. 1 ಕೋಟಿ, ಎಂಐಟಿ ಮಣಿಪಾಲ ಸಮೀಪದಿಂದ ಪರ್ಕಳ ಪುರಸಭೆ ಗಡಿವರೆಗೆ ಸ್ಥಾಪಿಸಲಾಗಿದೆ. ಉಡುಪಿ ನಗರ ಪಾಲಿಕೆಯು ಭಾರದ್ವಾಜ್ ಎಂಟರ್‌ಪ್ರೈಸಸ್ ನ ಸಹಯೋಗದಲ್ಲಿ ಸ್ಥಾಪನೆಯ ಮೇಲ್ವಿಚಾರಣೆ ನಡೆಸಿತು ಎಂದು ವರದಿ ತಿಳಿಸಿದೆ.

Also Read  ಬಲ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಕ್ವಿಡ್ ಕಾರು ➤ ಇಬ್ಬರು ಗಂಭೀರ, ಮೂವರಿಗೆ ಸಣ್ಣಪುಟ್ಟ ಗಾಯ

 

error: Content is protected !!
Scroll to Top