ಕಡಬ: ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಮೀನು ಮೀಸಲು – ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ

(ನ್ಯೂಸ್ ಕಡಬ) newskadaba.com ಕಡಬ, ಸೆ. 05. ಕಡಬ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ 3 ಎಕರೆ ಜಮೀನು ಕಾದಿರಿಸಲಾಗಿದ್ದು, ದ.ಕ. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಅವರು ಗುರುವಾರದಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಬಳಿಕ ಅಧಿಕಾರಿಗಳು ಹಾಗೂ ಸ್ಥಳೀಯ ನ್ಯಾಯವಾದಿಗಳ ಜೊತೆ ಚರ್ಚಿಸಿದ ಅವರು ಕಡಬ ತಾಲೂಕು ಕೇಂದ್ರಕ್ಕೆ ಸಿವಿಲ್ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿಗೃಹ, ವಕೀಲರ ಭವನ ಹಾಗೂ ನ್ಯಾಯಾಲಯ ಸಿಬ್ಬಂದಿಗಳ ವಸತಿಗೃಹಗಳ ನಿರ್ಮಾಣಕ್ಕಾಗಿ ಕಾದಿರಿಸಿರುವ ಜಮೀನು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಛೇರಿಗಳಿಗೆ ಹತ್ತಿರದಲ್ಲಿದ್ದು, ಸಾರ್ವಜನಿಕರಿಗೆ ಬಂದು ಹೋಗಲು ಅನುಕೂಲಕರವಾಗಿ ಎಲ್ಲಾ ರೀತಿಯಿಂದಲೂ ಸೂಕ್ತವಾಗಿದೆ. ಈಗಾಗಲೇ ಕಾದಿರಿಸಿದ ಜಾಗದಲ್ಲಿ ಯಾವ ರೀತಿ ಕಟ್ಟಡಗಳನ್ನು ನಿರ್ಮಿಸಬಹುದು ಎನ್ನುವ ಕುರಿತು ಲೋಕೋಪಯೋಗಿ ಇಲಾಖೆಯಿಂದ ಅಧಿಕೃತ ನಕ್ಷೆಯೂ ತಯಾರಾಗಿದೆ. ಆದಷ್ಟು ಶೀಘ್ರದಲ್ಲಿ ಕೆಲಸ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ನ್ಯಾಯಾಲಯಕ್ಕಾಗಿ ಕಾದಿರಿಸಿರುವ ಜಾಗಕ್ಕೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸೌಧದ ಪಕ್ಕದ ರಸ್ತೆಯನ್ನು ನ್ಯಾಯಾಲಯ ಸಂಕೀರ್ಣಕ್ಕೂ ಸಂಪರ್ಕ ಕಲ್ಪಿಸುವಂತೆ ನಕ್ಷೆಯಲ್ಲಿ ನಮೂದಿಸುವಂತೆ ಕಂದಾಯ ಅಧಿಕಾರಿಗಳು ಮತ್ತು ಭೂಮಾಪನ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

Also Read  ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿ.20 ರವರೆಗೆ ಸಕಾಲ ಸಪ್ತಾಹ

ಕಡಬ ವಕೀಲರ ಬಳಗದ ಮುಂದಾಳು ಶಿವಪ್ರಸಾದ್ ಪುತ್ತಿಲ ಮಾತನಾಡಿ,ಕಡಬ ತಾಲುಕಿನ ಜನರು ನ್ಯಾಯಾಲಯದ ಕಲಾಪಗಳಿಗಾಗಿ ಸುಳ್ಯ ಹಾಗೂ ಪುತ್ತೂರಿಗೆ ಅಲೆಯುವುದನ್ನು ತಪ್ಪಿಸಲು ಕಡಬದಲ್ಲಿಯೇ ನ್ಯಾಯಾಲಯ ಸಂಕೀರ್ಣ ಶೀಘ್ರ ಪ್ರಾರಂಭವಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು. ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ ಅವರು ಕಟ್ಟಡ ನಿರ್ಮಿಸುವ ಸಲುವಾಗಿ ತಯಾರಿಸಲಾದ ನಕ್ಕೆಯ ಮಾಹಿತಿಯನ್ನು ನ್ಯಾಯಾಧೀಶರಿಗೆ ನೀಡಿದರು. ಕಡಬ ಉಪತಹಶೀಲ್ದಾರ್ ಶಾಹಿದುಲ್ಲಾ ಖಾನ್ ಅವರು ಜಮೀನಿನ ಕುರಿತು ಮಾಹಿತಿ ನೀಡಿದರು. ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನ್ಯಾಯಾಲಯ ಕಛೇರಿಯ ವ್ಯವಸ್ಥಾಪಕ  ಸುಭಾಷ್, ಕಡಬ ಎಸ್.ಐ ಅಭಿನಂದನ್ ಎಂ.ಎಸ್., ಕಂದಾಯನಿರೀಕ್ಷಕ ಪೃಥ್ವಿರಾಜ್, ತಾಲೂಕು ಭೂಮಾಪಕ ಗಿರಿಗೌಡ, ಕಡಬ ವಕೀಲರ ಬಳಗದ ಪ್ರಮುಖರಾದ ಲೋಕೇಶ್ ಎಂ.ಜೆ ಕೊಣಾಜೆ, ಕೃಷ್ಣಪ್ಪ ಗೌಡ ಕಕ್ವೆ, ರಶ್ಮಿ ಜಿ., ಅಶ್ವಿತ್ ಕಂಡಿಗ, ಅವಿನಾಶ್ ಬೈತಡ್ಕ, ಸುಮನಾ ಎಂ. ಮುಂತಾದವರು ಹಾಜರಿದ್ದರು.

error: Content is protected !!
Scroll to Top