ಕಡಬ ಪರಿಸರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ► ಇಂದು ಸಂಜೆ ಬಿಜೆಪಿ ವತಿಯಿಂದ ಕಡಬ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಮೊಂಬತ್ತಿ ಉರಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.28. ಕಡಬ ಮೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ರೈತಾಪಿ ವರ್ಗ , ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ ಎಂದು ಕಡಬ ಭಾರತೀಯ ಜನತಾ ಪಕ್ಷ ಆರೋಪಿಸಿದೆ.

ಕಡಬದ ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ರಾಜ್ಯ ಕಾಂಗ್ರೆಸ್ ಅಧಿಕಾರ ವಹಿಸಿ 5 ವರ್ಷಗಳು ಪೂರ್ತಿಯಾಗುತ್ತ ಬರುತ್ತಿದ್ದರೂ ಪ್ರಣಾಳಿಕೆಯಲ್ಲಿ ರೈತರ ಅಭಿವೃದ್ದಿಯ ಬಗ್ಗೆ ನೀಡಿದ ಭರವಸೆ ಯಾವೂದನ್ನೂ ಈಡೇರಿಸಿಲ್ಲ. ರೈತರ ಪಂಪುಸೆಟ್ಟುಗಳಿಗೆ ಸರಿಯಾದ ವಿದ್ಯುತ್ ನೀಡದೇ ಕೃಷಿ ನಾಶಕ್ಕೆ ಕಾಂಗ್ರೆಸ್ ಕಾರಣವಾಗಿದೆ. ದಿನದ 24 ಬದಲು ಕನಿಷ್ಟ 12 ಗಂಟೆಯಾದರೂ ಗುಣಟಮಟ್ಟದ ವಿದ್ಯುತ್ ನೀಡದಿರುವುದು ದುರದುಷ್ಟಕರ. ಬಿಜೆಪಿ ಸರಕಾರವಿದ್ದಾಗ 15 ಗಂಟೆ ಗುಣಮಟ್ಟದ ವಿದ್ಯುತ್ ನೀಡುವ ಸಂದರ್ಬ ಕಡಬದ ಕಾಂಗ್ರೆಸ್ಸಿಗರು ಟೀಕಿಸುತ್ತಿದ್ದರು ಆದರೆ ಈಗ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರಕಾರವಿದ್ದಾಗ ರೈತರಿಗೆ ಗುಣಮಟ್ಟದ ವಿದ್ಯುತ್ ಉಚಿತವಾಗಿ ನೀಡಿ ರೈತರ ಶ್ರೇಯೋಭಿವೃದ್ದಿಯಲ್ಲಿ ತೊಡಗಿತ್ತು. ಆದರೆ ಈಗಿರುವ ಸರಕಾರ ಬಂಡವಾಳ ಶಾಹಿಗಳ ಹಿಂದೆ ಬಿದ್ದು ರೈತಾಪಿ ವರ್ಗವನ್ನು ಕಡೆಗಣಿಸಿದ್ದಾರೆ. ಕಡಬ ಭಾಗದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಕಡಬದ ವಿದ್ಯುತ್ ಸಮಸ್ಯೆ ಸರಿಪಡಿಸಲು ಯಾವೂದೆ ಕ್ರಮಕ್ಕೆ ಮುಂದಾಗಿದಿರುವುದು ನಾಚೀಕೆಗೇಡಿನ ವಿಚಾರ . ಮರಳು ದಂದೆಯಲ್ಲಿ ತೊಡಗಿಸಿಕೊಂಡಿರುವ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ವಿದ್ಯುತ್ ಸಮಸ್ಯೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳನ್ನು ಚುನಾಯಿಸಿರುವ ಜನತೆಗೆ ಅವರುಗಳ ಸಾಮರ್ಥ್ಯ ಅರ್ಥವಾಗಿದೆ. ವ್ಯವಹಾರಿಕ ಕೇಂದ್ರವಾಗಿರುವ ಕಡಬದಲ್ಲಿ ಸಿಟಿ ಫೀಡರ್‍ಗೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ಕಡಬದ ವ್ಯವಹಾರಗಳು ಸ್ಥಗಿತಗೊಂಡಿದೆ. ಸಮಸ್ಯೆಗಳ ಪರಿಹರಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಅವರುಗಳನ್ನು ಎಚ್ಚರಿಸುವ ಕೆಲಸವೂ ನಡೆಯುತ್ತಿಲ್ಲ. ಈ ಬಗ್ಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಇಂದು (ಫೆ.28) ಸಾಯಂಕಾಲ ಕಡಬ ಮೆಸ್ಕಾಂ ಕಛೇರಿ ಎದುರು ಮೊಂಬತ್ತಿ ಉರಿಸಿ ಪ್ರತಿಭಟಿಸಲಾಗುವುದು. ಮೆಸ್ಕಾಂನ ಉನ್ನತ ಮಟ್ಟದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡುವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

Also Read  ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್ ಭಟ್ ನಿಧನ

ಪತ್ರೀಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸತೀಶ್ ನಾಯಕ್, ಕಡಬ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ವಕ್ತಾರ ಫಯಾಝ್ ಕೆನರಾ ಉಪಸ್ಥಿತರಿದ್ದರು.

error: Content is protected !!
Scroll to Top