ಕಡಬ: ಸೆ.‌ 16ರ ವರೆಗೆ ಪಹಣಿಗಳಿಗೆ ಆದಾರ್ ಜೋಡಣೆ ಆಂದೋಲನ

(ನ್ಯೂಸ್ ಕಡಬ) newskadaba.com ಕಡಬ, ಸೆ. 05. ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಗಳಡಿ ಆಧಾರ್ ಜೋಡಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಡಬ ತಾಲೂಕಿನಲ್ಲಿ ಆಧಾರ್ ಜೋಡಣೆ ಪ್ರಗತಿ ಕಡಿಮೆಯಾಗಿರುವ ಕಾರಣ ಕಡಬ ತಾಲೂಕಿನಾದ್ಯಂತ ಸೆ. 16ರ ವರೆಗೆ ಆಂದೋಲನ ಹಮ್ಮಿಕೊಳ್ಳಾಗಿದೆ. ಆದಾರ್ ಜೋಡಣೆ ಬಾಕಿಯಿರುವ ಖಾತದಾರರು ಪಹಣಿಗಳೊಂದಿಗೆ ತಮ್ಮ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಕೊಳ್ಳಬೇಕಾಗಿ ಕಡಬ ತಹಶೀಲ್ದಾರ ಪ್ರಭಾಕರ ಖಜೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಈಜುಕೊಳದಲ್ಲಿ ನಟಿ ರಾಧಿಕಾ ಮದನ್ ವರ್ಕೌಟ್, ವಿಡಿಯೋ ವೈರಲ್!

error: Content is protected !!
Scroll to Top