ಉಳ್ಳಾಲ: ನಗರ ಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ 

(ನ್ಯೂಸ್ ಕಡಬ) newskadaba.com  ಉಳ್ಳಾಲ, ಸೆ. 5. ನಗರ ಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಗರ ಸಭೆಯಲ್ಲಿ ನಡೆಯಿತು. ನಗರ ಸಭೆ ಪೌರಾಯುಕ್ತ ಮತಡಿ ಅವರು ನೂತನ ಅಧ್ಯಕ್ಷ ಶಶಿಕಲಾ ಹಾಗೂ ಉಪಾಧ್ಯಕ್ಷ ಸಪ್ನಾಸಪ್ನಾ ಹರೀಶ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಪ್ರದಾನ ಮಾಡಿದರು. ನಗರ ಸಭೆ ನೂತನ ಅಧ್ಯಕ್ಷರಾಗಿ ಶಶಿಕಲಾ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾಧ್ಯಮ ಜೊತೆ ಮಾತನಾಡಿ, ನಗರ ಸಭೆಯ 31 ಕೌನ್ಸಿಲರ್ ಗಳ ‌ಬೆಂಬಲದಿಂದ ಅಧಿಕಾರ ಪಡೆದಿದ್ದೇನೆ. ನಗರ ಸಭೆ ವ್ಯಾಪ್ತಿಯ ಮೂಲಭೂತ ಸಮಸ್ಯೆಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Also Read  Pin-up Casino Giriş Azərbaycanda Rəsmi Say


ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ರಾಜ್ಯ ಸದಸ್ಯೆ ರಜಿಯಾ ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಈಶ್ವರ್ ಉಳ್ಳಾಲ, ಮನ್ಸೂರ್, ಯೂಸುಫ್ ಉಳ್ಳಾಲ, ದೇವಕಿ ಉಳ್ಳಾಲ, ಜಬ್ಬಾರ್, ಝಿಯಾದ್ ಮುಕ್ಕಚ್ಚೇರಿ, ನಗರ ಸಭೆ ಪೌರಾಯುಕ್ತ ಮತಡಿ, ಕಿರಿಯ ಅಭಿಯಂತರ ತುಳಸಿ ದಾಸ್, ಕಂದಾಯ ಅಧಿಕಾರಿ ನವೀನ್ ಹೆಗ್ಡೆ , ನಿರೀಕ್ಷಕ ಚಂದ್ರ ಹಾಸ್ ಮತ್ತಿತರರು ಉಪಸ್ಥಿತರಿದ್ದರು.

 

 

 

error: Content is protected !!
Scroll to Top