ಉಡುಪಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ 87 ವರ್ಷದ ನಿವೃತ್ತ ಶಿಕ್ಷಕಿಗೆ ಜೈಂಟ್ಸ್ ಗ್ರೂಪ್ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com  ಉಡುಪಿ, ಸೆ. 5. ಶಿಕ್ಷಕರ ದಿನಾಚರಣೆಯ ಅಂಗವಾಗಿ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಆರಾಧನಾ ವೃದ್ಧಾಶ್ರಮದಲ್ಲಿ 87 ವರ್ಷದ ನಿವೃತ್ತ ಶಿಕ್ಷಕಿ ಸತ್ಯವತಿ ಪ್ರಭು ಅವರನ್ನು ಉಡುಪಿಯ ಜೈಂಟ್ಸ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಜೈಂಟ್ಸ್ ಉಡುಪಿ ಅಧ್ಯಕ್ಷ ಯಶವಂತ ಸಾಲಿಯಾನ್ ವಹಿಸಿದ್ದರು. ಸಮಾರಂಭದಲ್ಲಿ ಜೈಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈನ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್ ಅವರು ಭಾಷಣ ಮಾಡಿದರು, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ ಸ್ವಾಗತಿಸಿದರು. ಡಯಾನಾ ಸುಪ್ರಿಯಾ ಅವರು ಶಿಕ್ಷಕಿ ಸತ್ಯವತಿ ಪ್ರಭು ಅವರ ಕಿರು ಪರಿಚಯ ಮಾಡಿದರು. ಸನ್ಮಾನ ಸ್ವೀಕರಿಸಿದ ಸತ್ಯವತಿ ಪ್ರಭು ಅವರು ಉಡುಪಿಯ ಜೈಂಟ್ಸ್ ಗ್ರೂಪ್ ಗೆ ಧನ್ಯವಾದಗಳನ್ನು ಅರ್ಪಿಸಿದರು.

Also Read  ಇಂದಿನಿಂದ ಎಂಡೋಸಲ್ಫಾನ್ ಸಂತ್ರಸ್ತರಿಗೆ ತಪಾಸಣಾ ಶಿಬಿರ ➤ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ

 

error: Content is protected !!
Scroll to Top