ಗೋರಕ್ಷಕರಿಂದ ಹತ್ಯೆಯಾದ ಸಬೀರ್ ಮಲಿಕ್ ಪತ್ನಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ

(ನ್ಯೂಸ್ ಕಡಬ) newskadaba.com  ಕೋಲ್ಕತ್ತಾ, ಸೆ. 5. ಆ.27ರಂದು ಹರ್ಯಾಣದಲ್ಲಿ ಗೋರಕ್ಷಕರಿಂದ ಹತ್ಯೆಗೀಡಾದ ಶಿಬ್‌ ಗಂಜ್‌ ನ ಸಬೀರ್ ಮಲಿಕ್ ಅವರ ವಿಧವೆ ಶಕೀಲಾ ಸರ್ದಾರ್ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ದಕ್ಷಿಣ 24 ಪರಗಣಗಳ ಬಸಂತಿಯಲ್ಲಿ ಬಿಎಲ್ ಮತ್ತು ಎಲ್ಆರ್ ಕಚೇರಿಯಲ್ಲಿ ಅಟೆಂಡರ್ ಹುದ್ದೆಯನ್ನು ನೀಡಲಾಗಿದೆ.


ಸಿಎಂ ಮಮತಾ ಬ್ಯಾನರ್ಜಿ ಇದೇ ವೇಳೆ ದಂಪತಿಯ 2 ವರ್ಷದ ಮಗಳು ಸಾನಿಯಾಗೆ ಚಾಕಲೇಟ್ ಮತ್ತು ಬಿಸ್ಕೆಟ್ ನೀಡಿದ್ದು, ಅಕ್ವೇರಿಯಂನ್ನು ಕೂಡ ತೋರಿಸಿ ಮಗುವಿನ ಜೊತೆ ಕುಶಲೋಪರಿ ನಡೆಸಿದ್ದಾರೆ. ಇದೇ ವೇಳೆ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಾಗಿ ಮಮತಾ ಬ್ಯಾನರ್ಜಿ ಶಕೀಲಾ ಸರ್ದಾರ್ ಗೆ ಭರವಸೆಯನ್ನು ನೀಡಿದ್ದಾರೆ.

Also Read  ಆಪರೇಷನ್ ಸನ್ ಸೆಟ್ ವಿಶೇಷ ಅಭಿಯಾನ ಆರಂಭ

 

error: Content is protected !!
Scroll to Top