ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ- ಕಲ್ಮಕಾರು ಸ.ಉ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 05. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳುಗೋಡಿನಲ್ಲಿ ನಡೆದ ಹರಿಹರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿಯ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗದಲ್ಲಿ ಪ್ರಥಮ, ಹಿರಿಯ ವಿಭಾಗದಲ್ಲಿ ದ್ವಿತೀಯ  ಹಾಗೂ ಕಿರಿಯ ಮತ್ತು ಹಿರಿಯ ವಿಭಾಗದ ಸಮಗ್ರ  ಪ್ರಶಸ್ತಿಯು ಲಭಿಸಿದೆ.

ಕಿರಿಯರ ವಿಭಾಗದ ಛದ್ಮವೇಷದಲ್ಲಿ 1ನೇ ತರಗತಿಯ ಹಂಸಿಕ  ಪ್ರಥಮ, ಅಭಿನಯ ಗೀತೆಯಲ್ಲಿ3ನೇ ತರಗತಿಯ  ರಕ್ಷಿತಾ ಎ.ಯು. ಪ್ರಥಮ, ಕ್ಲೇ ಮಾಡಲಿಂಗ್‌ ಮೋಕ್ಷಿತಾ (3ನೇ) ಪ್ರಥಮ, ಭಕ್ತಿ ಗೀತೆಯಲ್ಲಿ ನಿಖಿತ ಡಿ (3ನೇ) ತೃತೀಯ,  ಧಾರ್ಮಿಕ ಪಠಣ ಸಂಸ್ಕೃತ ಆರಾಧ್ಯ ಕೆ (4ನೇ) ಪ್ರಥಮ, ಚಿತ್ರಕಲೆಯಲ್ಲಿ ಯಶಿಕ ಎಂ.ಕೆ ತೃತೀಯ, ಆಶುಭಾಷಣ- ಯಶಸ್  ಪಿ ವೈ(4ನೇ) ದ್ವಿತೀಯ ಹಾಗೂ ಕನ್ನಡ ಕಂಠ ಪಾಠದಲ್ಲಿ ಚಿತ್ರಾಕ್ಷಿ ಕೆ ಡಿ(4ನೇ)  ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Also Read  ಕೇಂದ್ರ ಸರ್ಕಾರದ ಪಿಎಂಇಜಿಪಿ, ಮುದ್ರಾ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ - ಲೀಡ್ ಬ್ಯಾಂಕ್ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಚೌಟ ಸೂಚನೆ

ಹಿರಿಯರ ವಿಭಾಗದಲ್ಲಿ  ಧಾರ್ಮಿಕ ಪಠಣ ಸಂಸ್ಕೃತ ಮತ್ತು ಕವನ ವಾಚನದಲ್ಲಿ ಕ್ಷಮಾ ಡಿ(6ನೇ) ಪ್ರಥಮ-ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಚಿತ್ರಕಲೆ ನಿಶಾ ಎಂಪಿ(6ನೇ) ದ್ವಿತೀಯ,  ಅಭಿನಯ ಗೀತೆ ಮತ್ತು ದೇಶಭಕ್ತಿ ಗೀತೆಯಲ್ಲಿ ಅನ್ವಿತ ಕೆ.ಎಸ್ (7ನೇ) ಪ್ರಥಮ-ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಭಕ್ತಿ ಗೀತೆಯಲ್ಲಿ ಕೀರ್ತಿ(7ನೇ) ಪ್ರಥಮ , ಮಿಮಿಕ್ರಿ- ಚಂಪಕ್ ಕೆ ಎಂ(7ನೇ)  ಪ್ರಥಮ, ಕ್ಲೇ ಮಾಡಲಿಂಗ್ ತೃತೀಯ ,  ಪ್ರಬಂಧ ರಚನೆ ಆರಾಧ್ಯ ಕೆಎಸ್ (೭ನೇ)  ತೃತೀಯ, ಹಿಂದಿ ಕಂಠಪಾಠ ದಿವೀಶ್ ಗೌಡ ಜೆ.ಆರ್(7ನೇ) ದ್ವಿತೀಯ, ಕನ್ನಡ ಕಂಠಪಾಠ ತೃತೀಯ ಸ್ಥಾನ ಪಡೆದು ಸಮಗ್ರ  ಪ್ರಶಸ್ತಿ ಪಡೆದುಕೊಂಡರು.

error: Content is protected !!
Scroll to Top