ಕಡಬ: ಅಕ್ರಮ ಜಾನುವಾರು ಸಾಗಾಟ ಪತ್ತೆ ► 9 ಜಾನುವಾರುಗಳೊಂದಿಗೆ ಪಿಕಪ್ ವಾಹನ ವಶಕ್ಕೆ, ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಫೆ.28. ಪಿಕಪ್ ವಾಹನವೊಂದರಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆಹಚ್ಚಿರುವ ಕಡಬ ಪೊಲೀಸರು ಪಿಕಪ್ ಹಾಗೂ ಒಂಬತ್ತು ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಓರ್ವನನ್ನು ಬಂಧಿಸಿದ ಘಟನೆ ಬುಧವಾರದಂದು ನಡೆದಿದೆ.

ಕಡಬದಿಂದ ಪಂಜ ಕಡೆಗೆ ಅಮಾನುಷವಾಗಿ ಒಂಭತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದುದನ್ನು ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬ ಸ್ಮಶಾನದ ಬಳಿ ವಾಹನವನ್ನು ತಡೆಹಿಡಿದು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ಪಿಕಪ್ ಚಲಾಯಿಸುತ್ತಿದ್ದ ಕುಟ್ರುಪ್ಪಾಡಿ ಗ್ರಾಮದ ಕಲ್ಲೋಲಿಕಲ್(ವಿಮಲಗಿರಿ) ನಿವಾಸಿ ಮಣಿ ಎಂಬವರ ಪುತ್ರ ರಾಜು ಯಾನೆ ಮ್ಯಾಥ್ಯೂ (38) ಎಂಬಾತನನ್ನು ಬಂಧಿಸಿದ್ದಾರೆ. ಜಾನುವಾರುಗಳನ್ನು ಕಡಬ ಪೊಲೀಸ್ ಠಾಣೆಯ ವಠಾರದಲ್ಲಿ ಕಟ್ಟಿ ಹಾಕಲಾಗಿದೆ.

Also Read  ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 'ಬ್ರೈಟ್ ಭಾರತ್' ಪರಿಚಯಿಸುತ್ತಿದೆ ಅತೀ ದೊಡ್ಡ ಪ್ರಾಜೆಕ್ಟ್; ಮಾಸಿಕ ಕೇವಲ ಒಂದು ಸಾವಿರದಂತೆ ಪಾವತಿಸಿ- ಎರಡು ಬೆಡ್‌ ರೂಂನ ಮನೆ ಜೊತೆಗೆ ಕಾರು, ಆಕ್ಟಿವಾ, ಚಿನ್ನ, ಬೆಳ್ಳಿ, ವಜ್ರ ನಿಮ್ಮದಾಗಿಸಿ

error: Content is protected !!
Scroll to Top