2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದ ಸರ್ಕಾರ

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 5. ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್‌ನಂತೆಯೇ ಇರುತ್ತದೆ.

ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ)ದಂತೆ ರಚಿಸಿರುವ ಅಗ್ರಿಸ್ಟಾಕ್ ಉಪಕ್ರಮದ ಭಾಗವಾಗಿರುವುದು ಇದರ ಗುರಿಯಾಗಿದೆ. ಆಧಾರ್ ಕಾರ್ಡ್‌ನಂತೆಯೇ ರೈತರಿಗೆ ‘ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ ಹಣಕಾಸು ವರ್ಷದಲ್ಲಿ 6 ಕೋಟಿ, 2025-26ರ ಹಣಕಾಸು ವರ್ಷದಲ್ಲಿ 3 ಕೋಟಿ ಮತ್ತು 2026-27ನೇ ಸಾಲಿನಲ್ಲಿ 2 ಕೋಟಿ ಡಿಜಿಟಲ್ ಐಡಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.

Also Read  ರತನ್ ಟಾಟ ರವರಿಗೆ ಭಾರತ ರತ್ನ ನೀಡಿ: ಮಹಾರಾಷ್ಟ್ರ ಸಂಪುಟ ಕೇಂದ್ರಕ್ಕೆ ಒತ್ತಾಯ

 

 

 

error: Content is protected !!
Scroll to Top